

ಹುನಗುಂದ: ವಿಶ್ವಕರ್ಮ ಸಮಾಜದ ಮಕ್ಕಳಿಗೆ ಮಂತ್ರ ಶ್ಲೋಕಗಳನ್ನು ಕಲಿಸುವ ಮೂಲಕ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು ಎಂದು ಇಳಕಲ್ಲನ ಬ್ರಹ್ಮಾಂಡಬೇರಿಮಠದ ಶ್ರೀ ವಿಶ್ವನಾಥ ಸ್ವಾಮಿಗಳು ಹೇಳಿದರು.
ಪಟ್ಟಣದ ಚಿತ್ತವಾಡಗಿಯ ಕಾಳಿಕಾದೇವಿ ದೇವಸ್ಥಾನದಲ್ಲಿ ಸುವರ್ಣಕಾರರ ಸಂಘ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಶ ಸಹಸ್ರ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜವು ಯಾವುದರಲ್ಲಿಯೂ ಕಡಿಮೆ ಇಲ್ಲ. ನಮ್ಮ ಧರ್ಮವನ್ನು ಪರಿಪಾಲಿಸುತ್ತ, ಸಂಸ್ಕೃತಿ ಉಳಿಸಿಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.
ನಮ್ಮ ಸಮಾಜದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಒಂದು ಎಕರೆ ಜಮೀನನ್ನು ದಾನವಾಗಿ ನೀಡಲು ಸಿದ್ಧನಿದ್ದು, ಸಮಾಜದವರು ಯಾರಾದರೂ ಮುಂದೆ ಬಂದು ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ ನಿರ್ಮಿಸುವ ಮೂಲಕ ಸಮಾಜ ಸೇವೆಗೆ ಮುಂದೆ ಬನ್ನಿ ಎಂದರು.
ಹುನಗುಂದದ ಪಂಚಾನಗುರು ಮಠದ ಶ್ರೀ ಗುರಪ್ಪಯ್ಯ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಗಜೇಂದ್ರಗಡದ ಭಾಸ್ಕರ ಬಡಿಗೇರ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ವಿ.ವಿ. ಪತ್ತಾರ, ಮನೋಹರ ಪತ್ತಾರ, ರಾಜು ಬಡಿಗೇರ, ಇಳಕಲ್ಲ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ರಾಮಣ್ಣ ಮರೋಳ, ಮಂಜುನಾಥ ರೇವಣಕರ, ಇಳಕಲ್ಲ ಅಧ್ಯಕ್ಷ ವೀರಭದ್ರಪ್ಪ ಹಿಪ್ಪರಗಿ, ವೀರಣ್ಣ ಬಡಿಗೇರ, ಸಂಗಪ್ಪ ಪತ್ತಾರ, ಚಿದಾನಂದ ಬಡಿಗೇರ, ಬಾಳಪ್ಪ ಕಮ್ಮಾರ, ಪ್ರಕಾಶ ಪತ್ತಾರ, ಶರಣಪ್ಪ ಬಡಿಗೇರ, ಸಿದ್ದಪ್ಪ ಬಡಿಗೇರ, ಉದಯಕುಮಾರ ಕಮ್ಮಾರ , ವಿಜಯಕುಮಾರ ಬಡಿಗೇರ, ಎಸ್.ಕೆ. ಕೋಳೂರ, ನಾರಾಯಣಪ್ಪ ಬಡಿಗೇರ, ದೇವೀಂದ್ರಪ್ಪ ಮಾಯಾಚಾರಿ, ಶರಣಬಸಪ್ಪ ಮಾಯಾಚಾರಿ, ಅಮರಪ್ಪ ಪತ್ತಾರ, ಸೂಗಪ್ಪ ಪತ್ತಾರ, ಪೂಜಾ ಪತ್ತಾರ ಉಪಸ್ಥಿತರಿದ್ದರು.