ದಿವಂಗತ ಎಚ್.ನಾಗಪ್ಪ ನಾಮಫಲಕ ಅಳವಡಿಸಿ

ದಿವಂಗತ ಎಚ್.ನಾಗಪ್ಪ ನಾಮಫಲಕ ಅಳವಡಿಸುವಂತೆ ಹನೂರಿನಲ್ಲಿ ಅಭಿಮಾನಿಗಳು ಅಧಿಕಾರಿಗಳನ್ನು ಒತ್ತಾಯಿಸುತ್ತಿರುವುದು.
ದಿವಂಗತ ಎಚ್.ನಾಗಪ್ಪ ನಾಮಫಲಕ ಅಳವಡಿಸುವಂತೆ ಹನೂರಿನಲ್ಲಿ ಅಭಿಮಾನಿಗಳು ಅಧಿಕಾರಿಗಳನ್ನು ಒತ್ತಾಯಿಸುತ್ತಿರುವುದು.
Published on

ಹನೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ದಿವಂಗತ ಎಚ್.ನಾಗಪ್ಪ ವೃತ್ತದಲ್ಲಿ ಅವರ ನಾಮಫಲಕ ಅಳವಡಿಸುವಂತೆ ಅಭಿಮಾನಿಗಳು ಸೋಮವಾರ ಕೆಶಿಪ್ ಅಧಿಕಾರಿಗಳನ್ನು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ನಿರ್ದೇಶಕ ಕಣ್ಣೂರು ಬಸವರಾಜಪ್ಪ ಮಾತನಾಡಿ, ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ 15 ವರ್ಷಗಳ ಹಿಂದೆ ವೃತ್ತವನ್ನು ನಿರ್ಮಿಸಿ ಇದಕ್ಕೆ ದಿವಂಗತ ಎಚ್.ನಾಗಪ್ಪ ಅವರ ಹೆಸರನ್ನು ಇಡಲಾಗಿತ್ತು ಜತೆಗೆ 4 ಕಡೆಗಳಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಇದೀಗ ಕೆಶಿಪ್ ಯೋಜನೆಯಡಿ ರಸ್ತೆ ನಿರ್ಮಿಸುವುದರ ಜತೆಗೆ ವೃತ್ತ ನಿರ್ಮಿಸುತ್ತಿರುವುದು ಸಂತಸದ ಸಂಗತಿ. ಆದರೆ ಈಗಿರುವ ನಾಮಫಲಕವನ್ನು ವೃತ್ತದ ಮಧ್ಯದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಶಿಪ್ ಅಧಿಕಾರಿಗಳು, ಸರ್ಕಾರದ ನಿರ್ದೇಶನದಂತೆ ವೃತ್ತ ನಿರ್ಮಿಸಲಾಗುತ್ತಿದೆ. ಆದರೆ ನಾಮಫಲಕವನ್ನು ಅಳವಡಿಸುವ ಜವಾಬ್ದಾರಿ ನಮಗೆ ಸೇರಿಲ್ಲ ಎಂದರು. ಬಳಿಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್, ತಾತ್ಕಾಲಿಕವಾಗಿ ರಸ್ತೆ ಬದಿಯಲ್ಲಿ ನಾಮಫಲಕ ಅಳವಡಿಸಿಕೊಳ್ಳಿ. ವೃತ್ತ ನಿರ್ಮಾಣವಾದ ಬಳಿಕ ಈ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಈ ಸಂಬಂಧ ಕೆಶಿಪ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ನಾಮಫಲಕವನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಯಿತು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ನಿರ್ದೇಶಕ ಮುರುಡೇಶ್ವರಸ್ವಾಮಿ, ಮುಖಂಡರಾದ ವಿನೋದ್‌ಕುಮಾರ್, ನಾಗೇಂದ್ರ, ಮಲ್ಲೇಶ್, ಜಗದೀಶ್, ಶಾಂತಮೂರ್ತಿ, ಬಸವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net