

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠ ಸಂಸ್ಥಾನದ ಮಾದೇಶ್ವರ ಜಾತ್ರಾ ಮೈದಾನದಲ್ಲಿ ನೆಲೆಸಿರುವ ಮಳೆ ಮಲ್ಲೇಶ್ವರ ಸ್ವಾಮಿ ಅವರ ನೂತನ ದೇವಾಲಯ ಗೋಪುರದ ಕಳಸ ಪ್ರತಿಷ್ಠಾಪನೆಯನ್ನು ಶ್ರೀಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭಾನುವಾರ ನೆರವೇರಿಸಲಾಯಿತು.
ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಆಧ್ಯಾತ್ಮಿಕ ಚಿಂತನೆಗಳ ಜತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ರೂಪಿಸಿ ಪೀಳಿಗೆಯಿಂದ ಪೀಳಿಗೆಗೆ ಸನ್ಮಾರ್ಗದ ಕಡೆಗೆ ದಾರಿ ದೀಪವಾಗಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ದೊಡ್ಡೇರಿಹಳ್ಳಿ ಶ್ರೀ ಸಿದ್ದರಾಮೇಶ್ವರ ದೇವರು ಹಾಗೂ ಮಳೆಮಲ್ಲೇಶ್ವರರಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಪ್ರಮುಖರಾದ ಪರಮೇಶ್, ಚಂದ್ರಶೇಖರ್, ನೇತ್ರೇಶ್, ಬಾಬು, ಹೇಮಂತ್ ಇತರರು ಇದ್ದರು.
ಪೋಟೋ 02 11/05/25
ಅರಸೀಕೆರೆ ಗ್ರಾಮಾಂತರದ ಹಾರನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಮಳೆ ಮಲ್ಲೇಶ್ವರ ನೂತನ ದೇವಾಲಯದ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಪರಮೇಶ್, ಹೇಮಂತ್, ಬಾಬು, ಚಂದ್ರಶೇಖರ್ ಇತರರು ಇದ್ದರು.