ಸಬ್ಬಮ್ಮ ಭದ್ರಕಾಳಿಯ ಶಿಲಾಪ್ರತಿಮೆ ಪ್ರತಿಷ್ಠಾಪನೆ

17spt1
ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ ಶ್ರೀ ಸಬ್ಬಮ್ಮ ದೇವಿಯ ಶಿಲಾ ಪ್ರತಿಮೆ ಪ್ರತಿಷ್ಠಾಪನೆ ದಿನದಂದು ವಿವಿಧ ಹೋಮಗಳು ನಡೆದವು.
Published on

ಸೋಮವಾರಪೇಟೆ: ಕುಮಾರಳ್ಳಿ ಶ್ರೀ ಸಬ್ಬಮ್ಮ ಭದ್ರಕಾಳಿ ದೇವಿಯ ಪ್ರಧಾನ ಶಿಲಾ ಪ್ರತಿಮೆ ಪ್ರತಿಷ್ಠಾಪನೆ ಗ್ರಾಮಸ್ಥರ ಸಮ್ಮುಖದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

15ರಂದು ಸಂಜೆ ಹೆದ್ದೇವರ ಗುಡಿಯಲ್ಲಿ ಗಣಪತಿ ಪ್ರಾರ್ಥನೆಯೊಂದಿಗೆ ಶ್ರೀ ಸಬ್ಬಮ್ಮ ಬನದಲ್ಲಿ ವಿವಿಧ ಹೋವಗಳು ನೆರವೇರಿದವು. ನಂತರ ಪ್ರಸಾದ ವಿತರಿಸಲಾಯಿತು. ಭಾನುವಾರ ಬೆಳಗ್ಗೆ 6.30ಕ್ಕೆ ಹೆದ್ದೇವರ ಗುಡಿಯಿಂದ, ಸಬ್ಬಮ್ಮ ಸುಗ್ಗಿ ಬನದವರೆಗೆ 160 ಕಳಸಗಳನ್ನು ಹೊತ್ತ ಗ್ರಾಮದ ಮಹಿಳೆಯರು ಮೆರವಣಿಗೆ ನಡೆಸಿದರು. ಶ್ರೀ ಸಬ್ಬಮ್ಮ ದೇವಿ ಶಿಲೆಗೆ ಕ್ಷೀರ, ಪಂಚಾಮೃತ, ಎಳನೀರು ಅಭಿಷೇಕ ಮಾಡಲಾಯಿತು. ಗ್ರಾಮದ ಸಮೃದ್ಧಿ, ಮಳೆಗಾಗಿ ಗ್ರಾಮಸ್ಥರು ಸಾಮೂಹಿಕ ಪೂಜೆ ನಡೆಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಯು.ಕೆ.ದೇಶರಾಜು, ಹಗ್ಗಡಮನೆ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ.ಚಂಗಪ್ಪ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ತಮ್ಮಯ್ಯ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ಉದ್ಯಮಿ ಹರಪಳ್ಳಿ ರವೀಂದ್ರ, ನಿವೃತ್ತ ಇಂಜಿನಿಯರ್ ಜಯರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net