

ಮುದ್ದೇಬಿಹಾಳ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜೀರ್ಣೋದ್ಧಾರಗೊಳಿಸಿದ ಗಣಪತಿಯ ದೇವಸ್ಥಾನದಲ್ಲಿ ಎಡಮುರಿ ಗಣಪತಿಯ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಭಾನುವಾರ ಜರುಗಿತು.
ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮತ್ತು ಧರ್ಮಪತ್ನಿ ಅನುಪಮಾ ಶೇಗುಣಸಿ, ಆಸ್ಪತ್ರೆಯ ಪ್ಯಾಥಾಲಜಿ ವಿಭಾಗದ ಮುಖ್ಯಸ್ಥ ವಿಜಯ ಮಹಾಂತೇಶ ಪವಾಡಶೆಟ್ಟಿ ಮತ್ತು ಧರ್ಮಪತ್ನಿ ಪಾರ್ವತಿ ಪವಾಡಶೆಟ್ಟಿ ಅವರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಡಾ. ಅನೀಲಕುಮಾರ ಶೇಗುಣಸಿ, ವಿಜಯಮಹಾಂತೇಶ ಸಾಲಿಮಠ ವಕೀಲರು, ವಿಜಯಪುರದ ಜಿಓಸಿಸಿ ಬ್ಯಾಂಕ್ ಅಧ್ಯಕ್ಷ, ಆರೋಗ್ಯ ಇಲಾಖೆ ನೌಕರ ಆನಂದಗೌಡ ಬಿರಾದಾರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ ಮಾತನಾಡಿ, ಈ ಹಿಂದೆ ಇದ್ದ ಗಣಪತಿಯ ದೇವಸ್ಥಾನ ಜೀರ್ಣಾವಸ್ಥೆಯಲ್ಲಿತ್ತು. ಎಲ್ಲರ ಸಹಕಾರ ಮತ್ತು ಅಪೇಕ್ಷೆ ಮೇರೆಗೆ ಜೀರ್ಣೋದ್ಧಾರಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ನಾಗರಿಕರು, ಆಸ್ಪತ್ರೆ ಸಿಬ್ಬಂದಿಗಳ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್. ಬಿರಾದಾರ, ಬ್ಯಾಂಕ್ ನಿರ್ದೇಶಕರಾದ ಸತೀಶಕುಮಾರ ಓಸ್ವಾಲ್, ಚಂದ್ರಶೇಖರ ಸಜ್ಜನ, ಸಂಗನಗೌಡ ಬಿರಾದಾರ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ಗಣ್ಯರಾದ ಅಶೋಕ ನಾಡಗೌಡ, ವಿಕ್ರಮ ಓಸ್ವಾಲ್, ಡಾ. ವೀರೇಶ ಪಾಟೀಲ, ಡಾ. ವೀರೇಶ ಇಟಗಿ, ಮಹೇಶ ಕಲ್ಯಾಣಮಠ, ವಿಜಯಕುಮಾರ ಬಡಿಗೇರ, ಗೋವಿಂದರೆಡ್ಡಿ ಮೆದಿಕಿನಾಳ, ಚಿಕ್ಕಮಕ್ಕಳ ತಜ್ಞ ಡಾ. ಪರಶುರಾಮ ವಡ್ಡರ, ಡಾ. ಹರಿರಾಮ್, ಡಾ. ಬಸವರಾಜ ಚೌಧರಿ, ಆಸ್ಪತ್ರೆ ಸಿಬ್ಬಂದಿಗಳಾದ ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಠ್ಠಲ ಕಿಲಾರಹಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ, ರಾಜ್‌ಅಹ್ಮದ ಖಾಜಿ, ಎಸ್.ಎಸ್. ಮಾಗಿ, ಎಂ.ಎ. ಬಾಗವಾನ, ಸಂತೋಷ ಅಂಗಡಗೇರಿ, ಶಿವಕುಮಾರ ಒಣರೊಟ್ಟಿ, ರಾಜೇಶ್ವರಿ ಹೊಕ್ರಾಣಿ, ಬಸಮ್ಮ ಸಾರವಾಡ, ರೇಷ್ಮಾ ಚವ್ಹಾಣ, ಬಸವರಾಜ ಬಡಿಗೇರ ಪಾಲ್ಗೊಂಡಿದ್ದರು.