ಅಷ್ಟಭುಜೆ ದುರ್ಗಾಪರಮೇಶ್ವರಿ ಚರ ಪ್ರತಿಷ್ಠಾಪನೆ

23 09 2025_BGR RURAL_PAGE_02
ವಿಜಯಪುರ ಆನಂದನಗರದ ದೇವಾಲಯದ ಆವರಣದಲ್ಲಿ ಅಷ್ಟಭುಜೆ ದುರ್ಗಾಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅರ್ಚಕರಾದ ಅನಂತಕುಮಾರ ಶರ್ಮ, ವಿ.ಪಿ.ನಾಗೇಂದ್ರ, ವಿಜಯ ವಿನಾಯಕ ಸ್ವಾಮಿ ಸೇವಾ ಸಮಿತಿಯ ವಿ.ಪಿ.ಪ್ರಕಾಶ್​, ವಿ.ಎಂ.ರಮೇಶ್​, ನಾಗರಾಜ್​, ಪ್ರಭಾವತಿ, ರಂಜಿತಾ, ಮಂಜುಳಾ ಇತರರು ಇದ್ದರು.
Published on

ವಿಜಯಪುರ : ಇಲ್ಲಿನ ಕೋಲಾರ ರಸ್ತೆಯ ಆನಂದನಗರದ ಬಲಮುರಿ ವಿಜಯ ವಿನಾಯಕ ಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ ದೇವಾಲಯ ಆವರಣದಲ್ಲಿ ಅಷ್ಟಭುಜೆ ದುರ್ಗಾಪರಮೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ದೇವಿಗೆ ವಿಶೇಷ ಪುಷ್ಪಾಲಂಕಾರ, ಸುಮಂಗಲಿಯರಿಂದ ಕುಂಕುಮರ್ಚನೆ, ಮಂತ್ರ ಪುಷ್ಪ, ಅಷ್ಟಾವಧಾನ, ಹೋಮ ಸೇರಿ ಮುಂತಾದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಒಂಬತ್ತು ದಿನಗಳ ಕಾಲ, ನವರಾತ್ರಿಯ ದುರ್ಗಾಪರಮೇಶ್ವರಿ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಸೆ.28ರಂದು ಮಹಾಗಣಪತಿ ಹೋಮ ಮತ್ತು ದುರ್ಗಾ ಹೋಮ ಏರ್ಪಡಿಸಲಾಗಿದೆ. ಅ.4ರಂದು ಅಮ್ಮನವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜಬೀದಿ ಉತ್ಸವ. ಅ5ರಂದು ಅಮ್ಮನವರ ಜಲವಿಸರ್ಜನ ಕಾರ್ಯ

ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net