ಶ್ರೀಪಾಂಡುರಂಗ ರುಕುಮಾಯಿ ಮೂರ್ತಿಗಳ ಪ್ರತಿಷ್ಠಾಪನೆ

h12-itigatti
Published on

ಧಾರವಾಡ: ಜಿಲ್ಲೆಯ ಸುಕ್ಷೇತ್ರ ಇಟಿಗಟ್ಟಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ರುಕುಮಾಯಿ ಪುನರ್ ನಿರ್ಮಾಣಗೊಂಡ ದೇವಸ್ಥಾನ ಲೋಕಾರ್ಪಣೆ ಹಾಗೂ ಶ್ರೀ ಪಾಂಡುರಂಗ ರುಕುಮಾಯಿ ಮೂರ್ತಿಗಳ ಪ್ರತಿಷ್ಠಾಪನೆ, ಶ್ರೀ ಜ್ಞಾನೇಶ್ವರ ಮಹಾರಾಜರ ಮತ್ತು ಶ್ರೀ ತುಕಾರಾಮ ಮಹಾರಾಜರ ಮೂರ್ತಿಗಳ ನೂತನ ಪ್ರತಿಷ್ಠಾಪನೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಡಿ.ಎಲ್.ಆರ್.ಎಂ. ಫೌಂಡೇಷನ್ ಅಧ್ಯಕ್ಷ ಹಾಗೂ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಪಾಲ್ಗೊಂಡು ದೇವರ ದರ್ಶನ ಪಡೆದುರು. ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜುಕಾಳೆ, ಮುಖಂಡರಾದ ಶಿವಾನಂದ, ಆನಂದ ಜಾಧವ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net