ಕಡೂರಲ್ಲಿ ಶ್ರೀದುರ್ಗಾ ದೇವಿ ಪ್ರತಿಷ್ಟಾಪನೆ

kdr1 (14)
Published on

ಕಡೂರು: ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪಟ್ಟಣದ ಛತ್ರದ ಬೀದಿಯಲ್ಲಿ ಶ್ರೀದುರ್ಗಾ ಸೇವಾ ಸಮಿತಿಯಿಂದ ಶ್ರೀದುರ್ಗಾ ದೇವಿಯನ್ನು ಆಸ್ಥಾನದ ಮಂಟಪದಲ್ಲಿ ಶಾಸೋಕ್ತವಾಗಿ ಪ್ರತಿಷ್ಟಾಪಿಸಲಾಯಿತು.

ಬೆಳಗ್ಗೆ ಪ್ರಧಾನ ಅರ್ಚಕ ಪ್ರಶಾಂತ್ ಭಟ್ ನೇತೃತ್ವದಲ್ಲಿ ಗಣಹೋಮ, ಹಾಗೂ ದೇವಿ ಪ್ರತಿಷ್ಟಾಪನಾ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯ, ಸಂಕಲ್ಪ ಪೂಜೆ, ಗೋ ಪೂಜೆ, ಕಳಶ ಪ್ರತಿಷ್ಠಾಪನೆ ನೆರವೇರಿಸಲಾಯಿತು. ದೇವಿಯ ಮೂಲ ವಿಗ್ರಹವನ್ನು ಮೆರವಣಿಗೆ ಮೂಲಕ ಆಸ್ಥಾನದ ಮಂಟಪದವರೆಗೆ ಕರೆತರಲಾಯಿತು. ನಂತರ ಶಾಸಕ ಕೆ.ಎಸ್.ಆನಂದ್ ಕುಟುಂಬ ದೇವಿಗೆ ಮಾಂಗಲ್ಯ ತಾಳಿ ಸಮರ್ಪಿಸಿದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ದೇವಿ ಮಂಟಪಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಾಮಂಗಳಾರತಿ ಪೂಜಾ ಕೈಕಂರ್ಯಗಳು ನಡೆದವು. ಸಂಜೆ ದುರ್ಗಾದೀಪ ನಮಸ್ಕಾರ ಹಾಗೂ ರಂಗಪೂಜೆಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, 11ದಿನ ದೇವಿ ಆಸ್ಥಾನ ಮಂಟಪದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಸಮಿತಿಯಿಂದ ಪ್ರತಿನಿತ್ಯ ವಿಶೇಷ ಪೂಜೆ ಏರ್ಪಡಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಜಿಪಂ ಮಾಜಿ ಸದಸ್ಯೆ ಲಕ್ಕಮ್ಮ ಸಿದ್ದಪ್ಪ, ರೇಖಾ ಆನಂದ್, ಶ್ರೀದುರ್ಗಾ ಸೇವಾ ಸಮಿತಿಯ ಪದಾಧಿಕಾರಿಗಳಾದ ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಸದಸ್ಯ ಯತಿರಾಜ್, ಕೆ.ಸಿ.ವಿಕಾಸ್ ಚಂದ್ರು, ಹಳೇಪೇಟೆ ರಂಗನಾಥ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್. ದೇವರಾಜ್, ಆಕಾಶ್, ಮಂಜುನಾಥ್, ನಾಗೇಂದ್ರ ಅಗ್ನಿ, ಸಿದ್ದೇಶ್, ರಾಜುಕರಿಬಡ್ಡೆ, ಕೆ.ಎಂ.ನೂತನ್, ಹುಲಿಕೆರೆ ಮಹೇಶ್, ನಲ್ಲೂರಿಸುರೇಶ್, ಪ್ರದೀಪ್, ಮಲ್ಲಿಕಾರ್ಜುನ್, ಕಿರಣ್, ದಿಲೀಪ್, ಗಿರೀಶ್, ರಘು, ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net