ವಿಜೃಂಭಣೆಯಿಂದ ನಡೆದ ವಾಮಂಜೂರು ಶಾರದಾ ಪ್ರತಿಷ್ಠಾಪನೆ

ಮಹೋತ್ಸವದ ಕಾನೂನುತಡೆ-ಕೋರ್ಟ್ ಮೆಟ್ಟಿಲೇರಿದವರಿಗೆ ನ್ಯಾಯಾಲಯ ಛೀಮಾರಿ
ವಿಜೃಂಭಣೆಯಿಂದ ನಡೆದ ವಾಮಂಜೂರು ಶಾರದಾ ಪ್ರತಿಷ್ಠಾಪನೆ, ಮಹೋತ್ಸವದ ಕಾನೂನುತಡೆ-ಕೋರ್ಟ್ ಮೆಟ್ಟಿಲೇರಿದವರಿಗೆ ನ್ಯಾಯಾಲಯ ಛೀಮಾರಿ
ವಿಜೃಂಭಣೆಯಿಂದ ನಡೆದ ವಾಮಂಜೂರು ಶಾರದಾ ಪ್ರತಿಷ್ಠಾಪನೆ, ಮಹೋತ್ಸವದ ಕಾನೂನುತಡೆ-ಕೋರ್ಟ್ ಮೆಟ್ಟಿಲೇರಿದವರಿಗೆ ನ್ಯಾಯಾಲಯ ಛೀಮಾರಿ
Published on: 

ಮಂಗಳೂರು: ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯದ ಆಶ್ರಯದಲ್ಲಿ ಅ.16 ರಿಂದ 22 ರವರೆಗೆ ನಡೆಯಲಿರುವ ಐದನೇ ವರ್ಷದ ವಾಮಂಜೂರು ಶಾರದಾ ಮಹೋತ್ಸವದ ವಿಜೃಂಭಣೆಯ ಸಿದ್ಧತೆಯ ಸಂದರ್ಭದಲ್ಲಿ ಈ ಮಹೋತ್ಸವವನ್ನು ತಡೆಹಿಡಿಯಬೇಕೆಂದು ಅರ್ಜಿ ಸಲ್ಲಿಸಿದ್ದ ಉಳಾಯಿಬೆಟ್ಟು ಪಟ್ರಕೋಡಿ ಕೊರಗಜ್ಜ ಮನೆಯ ದೇವದಾಸ್ ಅಂಚನ್ ಯಾನೆ ದಿನೇಶ್ (47), ಗುಣಪಾಲ್ ವಾಮಂಜೂರು (47) ಮತ್ತು ನವೀನ್ ಶೆಟ್ಟಿ ವಾಮಂಜೂರು (51)ಅವರ ಕೋರಿಕೆಗೆ ಹಿನ್ನಡೆಯಾಗಿದ್ದು, ಕೋರ್ಟ್ ಛೀಮಾರಿ ಹಾಕಿ ಮುಖಭಂಗ ಮಾಡಿದೆ.

ಶಾರದಾ ಮಾತೆಯ ಕೃಪೆಯಂತೆ ಸುಸೂತ್ರವಾಗಿ ಮಾತೆಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆದಿದ್ದು, ಸತ್ಯಕ್ಕೆ ಸಂದ ಜಯ. ಈ ದಾವೆಗಾಗಿ ವಾದ ಮಂಡಿಸಿದ ಖ್ಯಾತ ವಕೀಲ ಬಿ. ಅರುಣ್ ಬಂಗೇರ ಹಾಗೂ ಚಿದಾನಂದ ಕೆದಿಲಾಯ ಇವರಿಂದ ಪ್ರತಿಷ್ಠಾಪನೆಗೆ ಯಶಸ್ಸು ಸಿಕ್ಕಿದೆ. ಅ.22ರಂದು ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆಗೆ 10ಕ್ಕೂ ಅಧಿಕ ಟ್ಯಾಬ್ಲೋ, ಕೇರಳ ಚೆಂಡೆ ವಾದ್ಯ ಹಾಗೂ ವರ್ಣರಂಜಿತ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಲಿವೆ. ಬೃಹತ್ ಶೋಭಾಯಾತ್ರೆಯೊಂದಿಗೆ ನಡೆಯಲಿರುವ ಈ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ವಾಮಂಜೂರು ಸಾರ್ವಜನಿಕ ಶ್ರೀ ಶಾರದೋತ್ಸವವನ್ನು ನಿಲ್ಲಿಸಲು ಕೋರ್ಟ್ ಮೆಟ್ಟಿಲೇರಿದ್ದ ದೂರುದಾರರ ಪರವಾಗಿ ಬಿ.ಜಿ. ಫುರ್ಟಾಡೊ ವಾದ ಮಂಡಿಸಿದ್ದರು. ನ್ಯಾಯದ ಪರ ವಾದಿಸಿದ ವಕೀಲರಿಗೆ ವಾಮಂಜೂರು ಶ್ರೀರಾಮನಗರದ ಶ್ರೀ ರಕ್ತೇಶ್ವರಿ ಹಾಗೂ ಪಂಚದೇವತಾ ಸಾನ್ನಿಧ್ಯ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net