ಕುರುಬನಕಟ್ಟೆಯಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ

3-kglphoto-2,
ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಕುರುಬನಕಟ್ಟೆ ಮಠದ ದೇವಾಲಯದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ ಇತ್ತೀಚೆಗ ನೆರವೇರಿತು.
Published on

ಕೊಳ್ಳೇಗಾಲ: ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಕುರುಬನಕಟ್ಟೆ ಮಠದ ದೇವಾಲಯದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಮಠದ ಧರ್ಮಾಧಿಕಾರಿ ಶ್ರೀ ವರುಣ ಲಿಂಗರಾಜೇ ಅರಸ್ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮುಂಜಾನೆ ಹೋಮ, ಹವನಗಳು, ವಿಶೇಷ ಪೂಜೆಗಳು ನೆರವೇರಿದವು. ನಂತರ ಶ್ರೀ ಮಂಟೇಸ್ವಾಮಿ ಶಿಷ್ಯಂದಿರಾದ ಶ್ರೀ ಜ್ಯೋತಿಲಿಂಗಯ್ಯ ಚೆನ್ನಯ್ಯ ಅವರ ಗದ್ದಿಗೆಯ ಮೇಲೆ ಶ್ರೀ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.

ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ಮಠದ ಹೊರವಲಯದಲ್ಲಿರುವ ತಾವರೆಕಟ್ಟೆಯಲ್ಲಿ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಸಾವಿರಾರು ಭಕ್ತರ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಗದ್ದುಗೆ ಹಾಗೂ ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ಪೂಜೆ ನೆರವೇರಿಸಲಾಯಿತು. ಕಂಡಾಯಗಳನ್ನು ಮೆರವಣಿಗೆ ಮೂಲಕ ಗದ್ದಿಗೆಗೆ ತರಲಾಯಿತು. ನಂತರ ವಿಶೇಷ ಪೂಜೆಗಳು ನೆರವೇರಿದವು. ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದರು. ಭಕ್ತರಿಗೆ ಬೆಳಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಮಾಡಿದ್ದರಿಂದ ದರ್ಶನ ಪಡೆದು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net