ಅಮ್ಮಿನಭಾವಿ ಜಿನಾಲಯದಲ್ಲಿ ಮಂಗಳ ಕಲಶ ಸ್ಥಾಪನೆ

7 Dwd 4 Shree Jinavani Mataji
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾತಪಸ್ವಿನಿ ಗಣಿನಿ ಆರ್ಯಿಕಾರತ್ನ 105 ಶ್ರೀ ಜಿನವಾಣಿ ಮಾತಾಜಿ ಅವರ 30ನೇ ಚಾತುರ್ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ನೇಮಿನಾಥ ಜಿನಾಲಯದಲ್ಲಿ ಜು. 9ರಂದು ಮಧ್ಯಾಹ್ನ 1 ಗಂಟೆಗೆ ಜೈನ ಧರ್ಮದ ವಿಶಿಷ್ಟ ಪೂಜಾ ವಿಧಾನಗಳೊಂದಿಗೆ ವಿದ್ಯುಕ್ತವಾಗಿ ಮಂಗಳ ಕಲಶ ಸ್ಥಾಪನಾ ಮಹೋತ್ಸವದೊಂದಿಗೆ ಚಾತುರ್ಮಾಸ ವ್ರತಾಚರಣೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಲಭಿಸಲಿದೆ.

ಮಾತಾಜಿ ಅವರ ಪಾವನ ಸಾನ್ನಿಧ್ಯದಲ್ಲಿ ಆರ್ಯಿಕಾ ಶ್ರೀ 105 ವಿನಮ್ರಜ್ಯೋತಿ ಮಾತಾಜಿ, ಕ್ಷುಲ್ಲಿಕಾ ಶ್ರೀ ಅಮೃತಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲಿಕಾ ಶ್ರೀ ಅಚಲಜ್ಯೋತಿ ಮಾತಾಜಿ ಪಾಲ್ಗೊಳ್ಳುವರು. ಅಮ್ಮಿನಬಾವಿ ಜೈನ ಮಠದ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಶ್ರಾವಕ- ಶ್ರಾವಕಿಯರಿಗೆ ಮಧ್ಯಾಹ್ನ ಮತ್ತು ಸಂಜೆ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಅಮ್ಮಿನಬಾವಿ ಜೈನ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net