ಹೊನ್ನಾಪುರದಲ್ಲಿ ಮಲ್ಲಜ್ಜೇಶ್ವರಮೂರ್ತಿ ಪ್ರತಿಷ್ಠಾಪನೆ

16 RON 1
Published on

ರೋಣ: ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಶ್ರೀ ಮಲ್ಲಜ್ಜೇಶ್ವರಮೂರ್ತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ, ಸಭಾಭವನ ಉದ್ಘಾಟನೆ ಹಾಗೂ ಶ್ರೀ ಮಲ್ಲಜ್ಜೇಶ್ವರ ಭಜನಾ ಮಹಾಮಂಗಲ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಿವಪೂಜೆ ಶಿವಾಚಾರ್ಯ ಮಹಾಸ್ವಾಮೀಜಿಗಳು, ಶ್ರೀ ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿದ್ದರು. ಮಾತೋಶ್ರೀ ಶಿವಕುಮಾರಿ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿ, ದೇವಪ್ಪ ಕೊಳಪ್ಪನವರ, ಸುರೇಶ ಬೇವಿನಕಟ್ಟಿ, ಶೇಖಣ್ಣ ಹುಲ್ಲುಗೂರು, ದ್ಯಾಮಪ್ಪ ಮುತ್ತಲಗೇರಿ, ಈಶ್ವರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಮಂಜುನಾಥ ಛಲವಾದಿ, ಬಸವರಾಜ ಛಲವಾದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net