ಕಾಮದೇವ ರತಿದೇವಿ ಮೂರ್ತಿ ಪ್ರತಿಷ್ಠಾಪನೆ

ಯಲಬುರ್ಗಾ ಪ್ರತಿಷ್ಠಾಪಿಸಿದ ಕಾಮದೇವ ಹಾಗೂ ರತಿದೇವಿ ಮೂರ್ತಿಗಳು.
ಯಲಬುರ್ಗಾ ಪ್ರತಿಷ್ಠಾಪಿಸಿದ ಕಾಮದೇವ ಹಾಗೂ ರತಿದೇವಿ ಮೂರ್ತಿಗಳು.
Published on

ಯಲಬುರ್ಗಾ: ಹೋಳಿ ಹಬ್ಬದ ಅಂಗವಾಗಿ ಪಟ್ಟದ ವಿವಿಧೆಡೆ ಕಾಮದೇವ ಹಾಗೂ ರತಿದೇವಿಯರ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ಪಟ್ಟಣದ ಗಾಳಿಯಾರ ಓಣಿ, ಕಂಡೇರ ಓಣಿ, ಸಾಲೇಶ್ವರ ಭವನದ ದೈವದ ಕಾಮದೇವ ಹಾಗೂ ಬನ್ನಿಕೊಪ್ಪದವರ ಮ್ಯಾಗಳ ಓಣಿಯ ಸರ್ಕಾರಿ ಕಾಮದೇವ ಹೆಸರಿನಲ್ಲಿ 150 ವರ್ಷಗಳ ಇತಿಹಾಸವುಳ್ಳ ಕಾಮದೇವ ಹಾಗೂ ರತಿದೇವಿಯರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.

ಶುಕ್ರವಾರ ಹುಣ್ಣಿಮೆ ದಿನ ಭಕ್ತರಿಂದ ಕಾಮದೇವ ಹಾಗೂ ರತಿದೇವಿಗೆ ನೈವೇದ್ಯ ಹಾಗೂ ವಿಶೇಷ ಪೂಜೆ ನಡೆಯಲಿದೆ. ಸಂಜೆ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಕಳಬಡಗ ಸೋಗ ವೇಷದಾರಿ, ಅಣುಕು ಶವಯಾತ್ರೆ, ಬಣ್ಣದ ಓಕುಳಿ ಪ್ರಾರಂಭವಾಗಿ, ಶನಿವಾರ ಬೆಳಗ್ಗೆ 6 ಗಂಟೆಗೆ ಕಾಮದೇವ ಹಾಗೂ ರತಿದೇವಿಯರ ಮೆರವಣಿಗೆ ಮಾಡಿ ಕಾಮ ದಹನ ಮಾಡಲಾಗುತ್ತದೆ. ನಂತರ ಎಲ್ಲರೂ ಬಣ್ಣದ ಓಕುಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net