ಆಲ್ದೂರಲ್ಲಿ ಹಿಂದು ದುರ್ಗಾ ದೇವಿ ಪ್ರತಿಷ್ಠಾಪನೆ

ald 1 (2)
Published on

ಆಲ್ದೂರು: ಪಟ್ಟಣದ ಮಹಾಗಣಪತಿ ದೇವಸ್ಥಾನದಲ್ಲಿ ಹಿಂದು ದುರ್ಗಾ ದೇವಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಿತು. ಮೊದಲ ಬಾರಿಗೆ ಪಟ್ಟಣದಲ್ಲಿ ಹಿಂದು ದುರ್ಗಾ ಸೇವಾ ಸಮಿತಿ ದುರ್ಗಾದೇವಿ ಪ್ರತಿಷ್ಠಾಪನೆ ಹಮ್ಮಿಕೊಂಡಿದ್ದು ಬೆಳಗ್ಗೆ 11.30ಕ್ಕೆ ದುರ್ಗಾ ಪಟ್ಟಣದ ಕೆಳಬಸ್ ನಿಲ್ದಾಣದಿಂದ ನಾದಸ್ವರ ಮೂಲಕ ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ನೂರಾರು ಮಹಿಳೆಯರು, ಪುರುಷರು ಮೆರವಣಿಯಯಲ್ಲಿ ಪಾಲ್ಗೊಂಡಿದ್ದರು.

ಮೂರ್ತಿ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಿದ ವೇಳೆ ಪಟಾಕಿ ಸಿಡಿಸಿ ಆರತಿ ಬೆಳಗಿ ಬರಮಾಡಿಕೊಂಡರು. ಮೊದಲೇ ಸಿದ್ದ ಪಡಿಸಿದ್ದ ಮಂಟಪದಲ್ಲಿ ದುರ್ಗಾ ದೇವಿಯನ್ನು ಪ್ರಪ್ರತಿಷ್ಠಾಪಿಸಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮ, ಮಹಾ ಮಂಗಳಾರತಿ ಜರುಗಿತು. ನಂತರ ಭಕ್ತರಿಗೆ ತೀರ್ಥ,ಪ್ರಸಾದ ವಿನಿಯೋಗ ಜರುಗಿತು.

ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಸುರೇಶ್, ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ರಾಜೀವ್, ಹಿಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಅನೂಪ್ ಕುಮಾರ್, ಕಾರ್ಯದರ್ಶಿ ಪುನೀತ್,ಉಪಾಧ್ಯಕ್ಷರಾದ ನಾಗೇಶ್, ರಾಜು, ಅಕ್ಷಯ್, ಚಂದ್ರಶೇಖರ್ ಗಣೇಶ್,ದರ್ಶನ್,ಭಾನು, ನಿರ್ದೇಶಕರಾದ ತುಡಕೂರು ಮಂಜು, ಮಿಥುನ್,ಆತ್ಮಿಕ್, ಮಹೇಂದ್ರ, ಹರೀಶ್, ರೋಹಿತ್, ಪ್ರತೀಕ್, ಪೂರ್ಣೇಶ್, ರುದ್ರೇಗೌಡ, ಭವ್ಯ ನಟೇಶ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net