ಹೈಮಾಸ್ಟ್ ಬೀದಿದೀಪ ಅಳವಡಿಕೆ

New Project (37)
Published on

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಸಮೀಪ ಸಂಸದರ ನಿಧಿಯಿಂದ ಅಳವಡಿಸಿದ ಹೈಮಾಸ್ಟ್ ಬೀದಿದೀಪವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸೋಮವಾರ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷೆ ಶಾಂತ ಬಿ. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಮೊಕ್ತೇಸರ ಜಗನ್ನಾಥ ರೈ, ಸಾಮಾಜಿಕ ನೇತಾರ, ಮಾಜಿ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ, ಮಾಹಿನ್ ಕೇಳೋಟ್, ತಿರುಪತಿ ಕುಮಾರ್ ಭಟ್, ಭಾಸ್ಕರ ಪಂಜಿತಡ್ಕ, ಸಂಘ-ಸಂಸ್ಥೆ ಸದಸ್ಯರು, ಮಾತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net