ನ.9 ರಂದು ಹನುಮಾನ ಮೂರ್ತಿ ಪ್ರತಿಷ್ಠಾಪನೆ

Installation of Hanuman idol on Nov. 9
ತೇರದಾಳ ತಾಲೂಕಿನ ಸಸಾಲಟ್ಟಿಯಲ್ಲಿ ನೂತನವಾಗಿ ನಿರ್ಮಿಸಿದ ಹನುಮಾನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಕಮಿಟಿ ವತಿಯಿಂದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು. ಶಿವಲಿಂಗಯ್ಯ ಮಠಪತಿ, ಘೂಳಪ್ಪ ಸಂತಿ, ಪರಸಪ್ಪ ದಳವಾಯಿ, ರಮೇಶ ಇಂಗಳೆ, ಮಹೇಶ ಹುಕ್ಕೇರಿ ಇತರರಿದ್ದರು.
Published on

ತೇರದಾಳ: ತಾಲೂಕಿನ ಸಸಾಲಟ್ಟಿಯ ಬಸವ ಸಂಗಮದ ಬಳಿಯ ಸ್ವಾಮಿಗಳ ತೋಟದಲ್ಲಿ ನೂತನ ಹನುಮಾನ ದೇವಸ್ಥಾನ ಉದ್ಘಾಟನೆ, ಹನುಮಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನ.9 ರಂದು ನಡೆಯಲಿದೆ.

ಕಾರ್ಯಕ್ರಮದಂಗವಾಗಿ ಶುಕ್ರವಾರ ಹನುಮಾನ ಮೂರ್ತಿಯನ್ನು ಗ್ರಾಮದ ಮೂಕಾಂಬಿಕಾ ದೇವಸ್ಥಾನದಿಂದ ಸಕಲ ವಾದ್ಯ ಮೇಳ, ಮುತ್ತೈದೆಯರ ಕುಂಭ ಹಾಗೂ ಆರತಿಯೊಂದಿಗೆ ಮೆರವಣಿಗೆಯಲ್ಲಿ ನೂತನ ಹನುಮಾನ ದೇವಸ್ಥಾನಕ್ಕೆ ತರಲಾಗುವುದು. ಅಂದೇ ಸಂಜೆ ಗ್ರಾಮದ ಬಸವೇಶ್ವರ ಭಜನಾ ಮಂಡಳಿಯಿಂದ ಭಜನಾ ಗಾಯನ ಕಾರ್ಯಕ್ರಮ ನಡೆಯಲಿದೆ.

ಹನುಮಾನ ಮೂರ್ತಿ ಪ್ರತಿಷ್ಠಾಪನೆ, ರುದ್ರಾಭಿಷೇಕ, ಮಹಾಪೂಜೆ, ಹೋಮ-ಹವನ, ನವಗ್ರಹ ಪೂಜೆಯು ಬೆಳಗಾವಿ ಜಿಲ್ಲೆ ಸವಸುದ್ದಿಯ ಶಿವಾನಂದ ಮಠಪತಿ ಅವರಿಂದ ನೆರವೇರಲಿದೆ. 11 ಗಂಟೆಗೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪ್ರವಚನ ಕಾರ್ಯಕ್ರಮ ನಡೆಯಲಿದೆ. ಚಿಮ್ಮಡದ ಪ್ರಭು ಶ್ರಿಗಳು, ಕೊಣ್ಣೂರು ಹೊರಗಿನಮಠದ ವಿಶ್ವಪ್ರಭು ಶ್ರೀ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮದ ಮಹೇಶ ಹಿರೇಮಠ, ದೇವಸ್ಥಾನ ಅರ್ಚಕ ರಾಮಯ್ಯ ಮಠಪತಿ, ಸಂಸದ ಪಿ.ಸಿ. ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣೂರ, ವೀಣಾ ಕಾಶಪ್ಪನವರ ಮತ್ತಿತರರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net