

ಬಂಟ್ವಾಳ: ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸಾಧನೆ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಿದೆ. ಸನ್ಮಾರ್ಗದ ಸಂಪಾದನೆಯ ಒಂದಂಶ ಸಮಾಜದ ಒಳ್ಳೆಯ ಕೆಲಸಕ್ಕೆ ಬಳಕೆಯಾಗಬೇಕು ಎನ್ನುವ ಉದ್ದೇಶದಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಆ ಕಾರ್ಯ ತನಗೆ ತೃಪ್ತಿ ನೀಡಿದೆ ಎಂದು ಬೆಂಗಳೂರಿನ ಉದ್ಯಮಿ ಪ್ರಕಾಶ್ ಬಿ.ಶೆಟ್ಟಿ ಹೇಳಿದರು.
ರಾಯಿ, ಅರಳ, ಕೈೊಲ ಗ್ರಾಮ ವ್ಯಾಪ್ತಿಗೊಳಪಟ್ಟ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜ್ಞಾನ ಮಂದಿರದಲ್ಲಿ ಭಾನುವಾರ ಗುರುಗಳ ವಿಗ್ರಹ ಪ್ರತಿಷ್ಠಾಪನೆ ಹಾಗು ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಜ್ಞಾನಮಂದಿರ ಲೋಕಾರ್ಪಣೆಗೊಳಿಸಿದರು. ಸಭಾವೇದಿಕೆಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿದರು. ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನ್ನಛತ್ರ ಉದ್ಘಾಟಿಸಿದರು. ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ ಜಿ.ಅಮೀನ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಟಿ.ಪೂಜಾರಿ, ವಾಸ್ತುಶಿಲ್ಪಿ ಪ್ರಮಲ್‌ಕುಮಾರ್ ಕಾರ್ಕಳ, ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಉದ್ಯಮಿಗಳಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಪ್ರುಲ್, ಗುಜರಾತ್ ಬಿಲ್ಲವ ಸಂಘ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬೀಣಾ ರಾಜ್ ಮೋಹನ್ ಶೆಟ್ಟಿ ಕುದ್ಮಾಣಿ, ಅನಿಲ್‌ಕುಮಾರ್, ಪ್ರಕಾಶ್ ಅಂಚನ್, ರಾಯಿ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಅಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಸಂಘ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಅಧ್ಯಕ್ಷ ಶೇಖರ್ ಅಂಚನ್, ಮಹಿಳಾ ಸಮಿತಿ ಅಧ್ಯಕ್ಷೆ ಸುಚಿತ್ರಾ ರಮೇಶ್, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕರ್ಕೇರ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು. ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಪ್ರಸ್ತಾವಿಸಿದರು. ಪ್ರಜ್ಞಾ ಒಡಿಲ್ನಾಳ ವಂದಿಸಿದರು.
ಮೂರ್ತಿ ಪ್ರತಿಷ್ಠಾಪನೆ
ಬೆಳಗ್ಗೆ ಗುರು ಗಣಪತಿ ಪ್ರಾರ್ಥನೆ, ಗಣಪತಿ ಅಷ್ಟದ್ರವ್ಯ ಹೋಮ, ಕಲಶ ಪ್ರತಿಷ್ಠಾಪನಾ ಪೂಜೆ, ಕಲಶ ಹೋಮ ನಡೆದು ಗುರುಗಳ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಅಲಂಕಾರ ಪ್ರತಿಷ್ಠಾಪನಾ ಹೋಮ, ಗುರು ನಾಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ ಶಾಂತಿಮಂತ್ರ ಜರುಗಿತು.
ನಾರಾಯಣ ಗುರುಗಳ ಚಿಂತನೆ ಇಂದಿನ ಕಾಲಟ್ಟದಲ್ಲಿ ಭಾರತಕ್ಕೆ ಅತ್ಯಂತ ಅವಶ್ಯ. ಜಾತಿಯನ್ನು ಕೇಳಬೇಡ, ಜಾತಿಯನ್ನು ಹೇಳಬೇಡ ಎಂದು ಹೇಳಿದ ನಾರಾಯಣ ಗುರುಗಳನ್ನೇ ಮುಂದಿಟ್ಟುಕೊಂಡು ಹಿಂದು ಸಮಾಜನ್ನು ವಿಭಜಿಸುವ ಪ್ರಯತ್ನವನ್ನು ಈ ನೆಲದ ಅಸ್ಮಿತೆಯನ್ನು ತಿಳಿಯದ ಜನರು ಮಾಡುತ್ತಿದ್ದಾರೆ. ಇಲ್ಲಿ ನಿರ್ಮಾಣಗೊಂಡ ಜ್ಞಾನ ಮಂದಿರ ಚಿಂತನೆಯ ಕೇಂದ್ರವಾಗಿ ಮೂಡಿಬರಬೇಕು. ಕ್ಯಾ.ಬ್ರಜೇಶ್ ಚೌಟ ಸಂಸದ ನಾರಾಯಣಗುರುಗಳು ಸಂರ್ಷವಿಲ್ಲದೆ ಸಮಾಜ ಸುಧಾರಣೆ ಡಿದವರು. ಒಳ್ಳೆಯತನದಲ್ಲಿ ಈ ಕಾರ್ಯಗಳನ್ನು ಸಾಧಿಸಿದವರು. ತನ್ನ ಶಾಸಕ ಅವಧಿಯಲ್ಲಿ ಸುಮಾರು 350 ದೇವಸ್ಥಾನ, ಮಂದಿರಗಳಿಗೆ ಸಹಕಾರ ನೀಡುವ ಅವಕಾಶ ಸಿಕ್ಕಿದೆ. ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಶಾಸಕ https://www.vijayavani.net/chappara-muhurta https://www.vijayavani.net/geography-learning-labs-in-government-schools