ಚುನಾವಣಾ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಕೆ

Installation of GPS equipment in election vehicles
ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನಿಯಂತ್ರಣ ಕೊಠಡಿ ನೋಡಲ್ ಅಧಿಕಾರಿ ಅಮರೇಶ ನಾಯಕ ಪರಿಶೀಲನೆ ನಡೆಸಿದರು.
Published on

ಬಾಗಲಕೋಟೆ: ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾದ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಿ ದಿನದ 24 ಗಂಟೆಗಳ ಕಾಲನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾ ನಿಯಂತ್ರಣ ಕೋಶದ ನೋಡಲ್ ಅಧಿಕಾರಿ ಅಮರೇಶ ನಾಯಕ ತಿಳಿಸಿದ್ದಾರೆ.

ಈ ಕುರಿತು ಲೋಕಸಭಾ ಚುನಾವಣೆ ಮಾಧರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ತಂಡ, ವಿಡಿಯೋ ಕಣ್ಗಾವಲು ತಂಡ, ಸೆಕ್ಟರ್ ಅಧಿಕಾರಿಗಳ ತಂಡಗಳಿಗೆ ಚುನಾವಣಾ ಮತಗಟ್ಟೆ ಕ್ಷೇತ್ರ ಪರಿಶೀಲನೆ, ಕ್ಷೇತ್ರ ಭೇಟಿಗಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಾಹನಗಳ ಮಾನಿಟರಿಂಗ್ ಮಾಡಲು ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ವಿವಿಧ ತಂಡಗಳ ಕಾರ್ಯ ವೈಖರಿಗಳನ್ನು ನಿಯಂತ್ರಣ ಕೊಠಡಿಯಲ್ಲಿಯೇ ವಾಹನಗಳ ಚಲನವಲನಗಳ ನೈಜ ಸ್ಥಿತಿಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣೆ ಪ್ರಕ್ರಿಯೆಗೆ ಎಪ್‌ಎಸ್‌ಟಿ ತಂಡಗಳಿಗೆ 66 ವಾಹನ, ವಿಎಸ್‌ಟಿ ತಂಡಗಳಿಗೆ 7, ಸೆಕ್ಟರ್ ಅಧಿಕಾರಿಗಳಿಗೆ 15, ಪೊಲೀಸ್ ಅಧಿಕಾರಿಗಳಿಗೆ 36 ಹಾಗೂ ಎಸ್‌ಎಸ್‌ಟಿ ತಂಡಗಳಿಗೆ 2 ಸೇರಿ ಒಟ್ಟು 126 ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ಇದರಿಂದ ಪ್ರತಿಯೊಂದು ವಾಹನಗಳ ಚಲನವಲನ, ಮತಗಟ್ಟೆಗಳ ಕ್ಷೇತ್ರ ಪರಿಶೀಲನೆ ಕಾರ್ಯ ಚುರುಕುಗೊಂಡಿದ್ದು, ಸಾಕಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು 26 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಮುಧೋಳ, ತೇರದಾಳ, ಜಮಖಂಡಿ, ಬೀಳಗಿ ಮತಕ್ಷೇತ್ರಗಳಲ್ಲಿ ತಲಾ 3 ಹಾಗೂ ಬಾದಾಮಿ, ಬಾಗಲಕೋಟೆ, ಹುನಗುಂದ ಮತಕ್ಷೇತ್ರಗಳಲ್ಲಿ ತಲಾ 4 ಚೆಕ್‌ಪೋಸ್ಟ ಹಾಗೂ ನರಗುಂದ ಮತಕ್ಷೇತ್ರದಲ್ಲಿ 2 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳ ದೃಶ್ಯಾವಳಿಗಳ ಪ್ರಸಾರ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಚೆಕ್‌ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲ ವಾಹನಗಳ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಸಿಬ್ಬಂದಿಗಳ ಕಾರ್ಯವೈಖರಿ ಮೇಲೆ ಸಹ ನಿಗಾ ಇಡಲಾಗುತ್ತಿದೆ ಎಂದು ನೋಡಲ್ ಅಧಿಕಾರಿ ಅಮರೇಶ ನಾಯಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net