

ಕೊಕ್ಕರ್ಣೆ: ಕಾಡೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಗುರುವಾರ ಶ್ರೀ ಅಮ್ಮನವರ ಮತ್ತು ಪರಿವಾರ ದೇವರ ಪುನಃ ಪ್ರತಿಷ್ಠಾಪನೆ ದೇವಿಪ್ರಸಾದ ತಂತ್ರಿ ಸೂರಾಲು ಮತ್ತು ದೇವಳ ಅರ್ಚಕ ಶ್ರೀಪತಿ ಉಡುಪ ನೇತೃತ್ವದಲ್ಲಿ ಜರುಗಿತು.
ಬೆಳಗ್ಗೆ ಮಹಾಗಣಪತಿ ಯಾಗ, ಗೋ ವೃಷಭ ಸ್ವರ್ಣ ದಾನಗಳು, ಶ್ರೀ ಅಮ್ಮನವರು ಹಾಗೂ ಶ್ರೀ ವೀರಭದ್ರ ದೇವರ ಬಿಂಬ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠಾಪನೆ, ಜೀವಕಲಶ ಸೇಚನ, ತತ್ವ ಹೋಮ, ಶಾಂತಿ ಹೋಮ, ಧಾರ್ಮಿಕ ಕಾರ್ಯಕ್ರಮ ಮಹಾಪೂಜೆ, ದೇವರ ಸಂದರ್ಶನ, ಮಹಾ ಅನ್ನಸಂತರ್ಪಣೆ ನಡೆಯಿತು. ಆಡಳಿತ ಮೊಕ್ತೇಸರರು ಮತ್ತು ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.
ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿ ಆಶೀರ್ವಚನಗೈದರು. ದೇವಳ ಆಡಳಿತ ಮಂಡಳಿ, ದೇವಳ ವತಿಯಿಂದ ಶ್ರೀಗಳನ್ನು ಗೌರವಿಸಿದರು.