

ಲೋಕಾಪುರ: ಪಟ್ಟಣದ ವಿವಿಧ ವಾರ್ಡ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆರವಣಿಗೆಯಲ್ಲಿ ಗಣೇಶ ಮೂರ್ತಿಗಳನ್ನು ತಂದು ಆಯ್ದ ಜಾಗಗಳಲ್ಲಿ ಶನಿವಾರ ಪ್ರತಿಷ್ಠಾಪಿಸಲಾಯಿತು.
ವೆಂಕಟೇಶ್ವರ ನಗರ, ಎಪಿಎಂಸಿ ಯಾರ್ಡ್, ಮೇನ್ ಬಜಾರ್, ಬ್ರಾಹ್ಮಣ ಗಲ್ಲಿ, ಸುಭಾಸನಗರ, ಜ್ಞಾನೇಶ್ವರ ಮಠದ ಆವರಣ, ದೇಸಾಯಿವಾಡೆ, ಕುಬಸದ ಗಲ್ಲಿ, ವೆಂಕಟಾಪುರ, ಜಾಲಿಕಟ್ಟಿ, ಠಾಣಿಕೇರಿ, ನಾಗಣಾಪುರ, ವರ್ಚಗಲ್, ಚೌಡಾಪುರ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ವಾರ್ಡ್‌ಗಳ ಸುಮಂಗಲಿಯರು ಕುಂಭಮೇಳದೊಂದಿಗೆ ಗಣೇಶನಿಗೆ ಪೂಜೆ ಸಲ್ಲಿಸಿದರು.
ಉತ್ಸವ ನಿಮಿತ್ತ ಗಣೇಶ ಮಂಡಳಿಗಳು ಆರೋಗ್ಯ ತಪಾಸಣೆ, ರಸಮಂಜರಿ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ.
ಪಿಎಸ್‌ಐ ಕೆ.ಬಿ. ಜಕ್ಕನ್ನವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.