21ರಿಂದ ದೇವಿ ವಿಗ್ರಹ ಪ್ರತಿಷ್ಠಾಪನೆ

pnh temple
ಶ್ರೀ ಆದಿಶಕ್ತಿ ಕೆಂಪಮ್ಮ ದೇವಿ ದೇಗುಲ.
Published on

ಪಂಚನಹಳ್ಳಿ: ಕುಂದೂರು ಗ್ರಾಮದಲ್ಲಿ ಶ್ರೀ ಆದಿಶಕ್ತಿ ಕೆಂಪಮ್ಮ ದೇವಿ ನೂತನ ಶಿಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನ ಹಾಗೂ ಅಷ್ಟಬಂಧನ ಕಾರ್ಯಕ್ರಮ ಫೆ.21 ಮತ್ತು 22ರಂದು ನಡೆಯಲಿದೆ.

ಮಧ್ಯಾಹ್ನ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಮರಳು ಸಿದ್ದೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ಶ್ರೀ ಮಾಧವರಾಯಸ್ವಾಮಿ, ಶ್ರೀ ಕೋಡಿ ಲಕ್ಕಮ್ಮ, ಶ್ರೀ ಬನಶಂಕರಿ ದೇವಿಯವರ ಆಗಮನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. 22ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಸುಪ್ರಭಾತ ಸೇವೆ, ದರ್ಪಣ ದರ್ಶನ, ಗಣಹೋಮ, ಮಹಾ ಮಂಗಳಾರತಿಯೊಂದಿಗೆ ದೇವಿಯವರ ನೂತನ ಶಿಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ 2.30ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳ ಆಯೋಜನೆ, ವೀರಗಾಸೆ, ವೀರಭದ್ರ ಕುಣಿತ ಮತ್ತು ಚಂಡೆ ಮದ್ದಳೆ ಕಾರ್ಯಕ್ರಮಗಳೊಂದಿಗೆ ಎಲ್ಲ ದೇವರ ಉತ್ಸವ, ಅನ್ನ ಸಂತರ್ಪಣೆ ಮತ್ತು ರಾತ್ರಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net