

ರೋಣ: ಅಪರಾಧ ಚಟುವಟಿಕೆ ತಡೆಯಲು ಅಂಗಡಿಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಹೇಳಿದರು. ಪಟ್ಟಣದಲ್ಲಿ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಿರುವ ಕುರಿತು ಈಚೆಗೆ ಪರಿಶೀಲಿಸಿ ಮಾತನಾಡಿದರು. ಪಿಎಸ್‌ಐ ಮತ್ತು ಸಿಬ್ಬಂದಿ ಬಸ್ ನಿಲ್ದಾಣದ ಮುಲ್ಲಾನಭಾವಿ ವೃತ್ತ, ಸೂಡಿವೃತ್ತ, ಪೋತರಾಜನ ಕಟ್ಟಿ ಹಾಗೂ ತಹಸೀಲ್ದಾರ್ ಕಚೇರಿಯ ಬಳಿಯ ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ತೆರಳಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದರು. ಪೊಲೀಸ್ ಸಿಬ್ಬಂದಿ ಕುಮಾರ ತಿಗರಿ, ಮಂಜು ಕುರಿ, ಶಂಕರ ಮಿಸ್ಕಿನ್, ಇತರರಿದ್ದರು.