25 ರಂದು ಬುದ್ಧ ಮೂರ್ತಿ ಪ್ರತಿಷ್ಠಾಪನೆ

teradal 22-1
ತೇರದಾಳ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರು ಬುದ್ಧ ಮೂರ್ತಿ ಪ್ರತಿಷ್ಠಾಪನೆ ಕುರಿತ ಭಿತ್ತಿಚಿತ್ರ ಪ್ರದರ್ಶಿಸಿದರು. ಪರಸಪ್ಪ ಮಾಸ್ತಿ, ದಯಾನಂದ ಕಾಳೆ, ಹನುಮಂತ ಜಗದಮನಿ ಇತರರಿದ್ದರು.
Published on

ತೇರದಾಳ(ಗ್ರಾ): ಪಟ್ಟಣದಲ್ಲಿ ತಕ್ಷಶಿಲಾ ಮಹಾ ಬುದ್ಧ ವಿಹಾರ ಇಂಟರ್‌ನ್ಯಾಷನಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅ.25 ರಂದು 68ನೇ ಧಮ್ಮ ಚಕ್ರ ಪರಿವರ್ತನಾ ದಿನದ ಪ್ರಯುಕ್ತ ಬುದ್ಧ ಮೂರ್ತಿ ಪ್ರತಿಷ್ಠಾಪನೆ, ವಿಹಾರದ ನಾಮಕರಣ ಮತ್ತು ಪ್ರಜ್ಞಾಬೋಧಿ ಭಂತೇಜಿಯವರ ವರ್ಷಾವಾಸ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ಮುಖಂಡರು ತಿಳಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಸಪ್ಪ ಮಾಸ್ತಿ, ದಯಾನಂದ ಕಾಳೆ, ಅಂದು ಬೆಳಗ್ಗೆ ಬುದ್ಧ ಮೂರ್ತಿಯನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಬೆಳಗ್ಗೆ 8ರಿಂದ ಬುದ್ಧ ವಿಹಾರದಲ್ಲಿ ಪೂಜಾ ಕಾರ್ಯಕ್ರಮಗಳೊಂದಿಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ನಂತರ ವಿಹಾರದ ನಾಮಕರಣ, ಭಂತೇಜಿಯವರ ವರ್ಷಾವಾಸ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ ಎಂದರು.

ತಕ್ಷಶಿಲಾ ಟ್ರಸ್ಟ್ ಅಧ್ಯಕ್ಷ ಪ್ರಜ್ಞಾ ಬೋಧಿ, ಉಪಾಧ್ಯಕ್ಷ ಲಡಾಕದ ಥುಪ್ಸತಾನ ುಲ್ಲಿಂಗ ಲಾಮಾ ಪ್ಲೇಹ, ಸದಸ್ಯರಾದ ಮಿರತ್‌ದ ಡಾ. ಭಿಕ್ಕು ನಾಗಭೂಷಣ, ನಾಗ್ಪೂರದ ಭಂತೇಜಿ ನಾಗಾನಂದ, ಭಂತೇಜಿ ನಾಗಪ್ರಕಾಶ, ಭಂತೇಜಿ ಮಹಾನಾಗ, ಆಂಧ್ರ ಪ್ರದೇಶದ ಭಿಕ್ಕು ಸದ್ದಾರಕ್ಕಿತ, ತಮಿಳುನಾಡಿನ ಭಿಕ್ಕು ಮಹಿಂದ ಸಾಕ್ಯ, ನಾಗ್ಪೂರದ ಡಾ.ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಸ್ಮಾರಕ ಸಮಿತಿ ಅಧ್ಯಕ್ಷ ಆರ್ಯ ನಾಗಾರ್ಜುನ ಸುರಯೀ ಸಸಾಯಿ ಮತ್ತಿತರರು ಆಗಮಿಸುವರೆಂದು ತಿಳಿಸಿದರು.

ಹನುಮಂತ ಜಗದಮನಿ, ಮಧು ಕಾಂಬಳೆ, ಸಂತೋಷ ಮಾಸ್ತಿ, ಗಣಪತಿ ಕಾಂಬಳೆ, ಬಸು ಯಲ್ಲಡಗಿ, ಶ್ರೀಶೈಲ ಹಳೆಮನಿ, ಅಪ್ಪಾಸಾಬ ಕಾಂಬಳೆ, ಮಹಾದೇವ ಮಾಂಗ, ಸಂಗಪ್ಪ ಬಡಿಗೇರ, ರಘು ಮಾಸ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net