ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ

19 RON 2
Published on

ರೋಣ: ಮಠ-ಮಂದಿರಗಳು ನೆಮ್ಮದಿ ನೀಡುವ ತಾಣಗಳು, ಅಂತಹ ನೆಮ್ಮದಿಯ ತಾಣವಾಗಲಿರುವ ಅಂಬಾಭವಾನಿ ಮಂದಿರ ನಿರ್ಮಾಣಕ್ಕೆ ಭೂಮಿ ದಾನ ನೀಡಿದ ದಿ.ಯಚ್ಚರಪ್ಪ ಶಂಕ್ರಪ್ಪ ಬ್ಯಾಳಿ ಅವರ ಸ್ಮರಣೆ ಅಗತ್ಯ ಎಂದು ತಾಪಂ ಮಾಜಿ ಅಧ್ಯಕ್ಷ ವೀರಯ್ಯ ಎಸ್. ಹಿರೇಮಠ ಹೇಳಿದರು.

ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಬುಧವಾರ ಅಂಬಾಭವಾನಿ ಟ್ರಸ್ಟ್ ಹಮ್ಮಿಕೊಂಡಿದ್ದ ನೂತನ ಕಟ್ಟಡದ ಶಿಲಾನ್ಯಾಸ ಅನಾವರಣ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್.ಬಿ. ನರಸಣ್ಣವರ, ಎಚ್.ಬಿ. ಐವಳ್ಳಿ, ಮಾತನಾಡಿದರು.

ಮಲ್ಲಯ್ಯ ಹಿರೇಮಠ, ರಾಜಣ್ಣ ಗುರಿಜಿ, ಮುದಿಯಪ್ಪ ಕರಡಿ, ಬಸವರಾಜ ಬ್ಯಾಳಿ, ಮುದಕಪ್ಪ ಅಡ್ನೂರ, ರೇಣುಕಾ ಗಾಣಿಗೇರ, ಮಹಾದೇವಿ ಕಲ್ಲುಡಿ, ಈಶ್ವರಪ್ಪ ಹೆರಕಲ್, ಎಂ.ಎಂ. ಗುದ್ನೇಪ್ಪನವರ, ಆರ್.ಎನ್. ಜೋಶಿ, ಮಹಾದೇವಿ ಬ್ಯಾಳಿ, ಶಂಕ್ರಪ್ಪ ಬ್ಯಾಳಿ, ಭೀಮಪ್ಪ ನರೇಗಲ್ಲ, ತಿಪ್ಪಣ್ಣ ಗುದ್ನೆಪ್ಪನವರ, ಶರಣಪ್ಪ ಆರೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net