ನವಣಕ್ಕಿ ನಾಗಪ್ಪತಾತನ ಪುತ್ಥಳಿ ಪ್ರತಿಷ್ಠಾಪನೆ

ಗಂಗಾವತಿಯಲ್ಲಿ ಸರ್ವ ಸಮುದಾಯದ ದೈವೀ ಪುರುಷ ನವಣಕ್ಕಿ ನಾಗಪ್ಪ ತಾತಾನವರ ಪುಣ್ಯಸ್ಮರಣೋತ್ಸವ ನಿಮಿತ್ತ ಕರ್ತೃ ಗದ್ದುಗೆಯಲ್ಲಿ ಅಮೃತಶಿಲೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಪ್ರತಿಷ್ಠಾಪನೆ ಸಮಿತಿ ಸದಸ್ಯ ಮಂಜುನಾಥ ಕುರುಗೋಡು, ಪ್ರಮುಖರಾದ ಶ್ರೀಧರ ಗೌಡ, ಲಕ್ಷ್ಮಣಪ್ಪ ಶಿರವಾರ, ಶ್ಯಾವಿ ತಿಪ್ಪಣ್ಣ ಇತರರಿದ್ದರು.

Published on

ಗಂಗಾವತಿ: ಸರ್ವ ಸಮುದಾಯದ ದೈವೀ ಪುರುಷ ನವಣಕ್ಕಿ ನಾಗಪ್ಪ ತಾತಾನವರ 21ನೇ ಪುಣ್ಯಸ್ಮರಣೋತ್ಸವ ನಿಮಿತ್ತ ನಗರದ ಬೈಪಾಸ್ ರಸ್ತೆ ಕರ್ತೃ ಗದ್ದುಗೆಯಲ್ಲಿ ಮಂಗಳವಾರ ಅಮೃತಶಿಲೆ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಂತ್ರಶಕ್ತಿಯಿಂದ ಬದುಕಿನ ದಾರಿ ತೋರಿಸುತ್ತಿದ್ದ ನವಣಕ್ಕಿ ನಾಗಪ್ಪನವರ ಪುತ್ಥಳಿಯನ್ನು ಭಕ್ತರ ನೆರವಿನೊಂದಿಗೆ ಅಮೃತಶಿಲೆಯಿಂದ ತಯಾರಿಸಿದ್ದು, ಪುಣ್ಯ ಸ್ಮರಣೆಯಂದು ವಿಶೇಷ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು. ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ, ಧಾರ್ಮಿಕ ಸಭೆ ನಂತರ ಅನ್ನಸಂತರ್ಪಣೆ ಮಾಡಲಾಯಿತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಅಪಾರ ಭಕ್ತರನ್ನು ಹೊಂದಿರುವ ನವಣಕ್ಕಿ ನಾಗಪ್ಪನವರು ಮನೆ ಮದ್ದಿನಿಂದ ಅನೇಕ ರೋಗಗಳಿಗೆ ಪರಿಹಾರ ನೀಡುತ್ತಿದ್ದರು. ಇಂದಿಗೂ ಭಕ್ತರು ಅವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಪ್ರತಿಷ್ಠಾಪನೆ ಸಮಿತಿ ಸದಸ್ಯ ಮಂಜುನಾಥ ಕುರುಗೋಡು ಮಾತನಾಡಿ, ಶಿಲಾಮೂರ್ತಿ ಪ್ರತಿಷ್ಠಾಪನೆ ಮೂಲಕ ಭಕ್ತರ ಆಶಯಗಳನ್ನು ಈಡೇರಿಸಲಾಗಿದೆ ಎಂದರು.

ಕುರಹಿನ ಶೆಟ್ಟಿ ಸಮಾಜದ ಪ್ರಮುಖರಾದ ಎಂ.ಸರ್ವೇಶ ಮಲ್ಲಿಕಾರ್ಜುನ, ಶ್ರೀಧರಗೌಡ, ಲಕ್ಷ್ಮಣಪ್ಪ ಶಿರವಾರ, ಶ್ಯಾವಿ ತಿಪ್ಪಣ್ಣ, ಸುನೀತಾ, ಏಳುಭಾವಿ ಕುಬೇರಪ್ಪ, ಕೆ.ಬಸವರಾಜ, ಎಸ್.ಬಸವರಾಜ, ಉಪ್ಪಾರ ಕೃಷ್ಣ, ರಾಘವೇಂದ್ರ ನವಣಕ್ಕಿ, ಶ್ರೀನಿವಾಸ ತಾಂದಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net