ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ

23Savadatti1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 33;
Published on

ಸವದತ್ತಿ: ತಾಲೂಕಿನ ಸರ್ಕಾರಿ ಶಾಲೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಮಕ್ಕಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಕ್ರಮವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯತೆ ವಹಿಸಿ ಮಾತನಾಡಿ, ಹೂಲಿಕಟ್ಟಿ ಗ್ರಾಮದ ಜನತಾ ಕಾಲನಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕಲುಷಿತ ನೀರು ಸೇವನೆಯಂತಹ ಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

15 ದಿನ ಮುಂಚಿತವಾಗಿ ಸಭೆ ಕುರಿತು ಮಾಹಿತಿ ನೀಡಿದರೂ ಕೇವಲ 27 ಇಲಾಖೆಗಳ ಮಾಹಿತಿ ಮಾತ್ರ ಇದೆ. ಉಳಿದ ಇಲಾಖೆಗಳ ಮಾಹಿತಿ ಎಲ್ಲಿದೆ? ಮುಂದಿನ ಬಾರಿ ಇಲಾಖೆ ಸಂಪೂರ್ಣ ಮಾಹಿತಿ ಜತೆಗೆ ಕಡ್ಡಾಯವಾಗಿ ಇಲಾಖೆ ಮುಖ್ಯಸ್ಥರೇ ಸಭೆಗೆ ಹಾಜರಾಗಬೇಕೆಂದು ಎಚ್ಚರಿಸಿದರು. ಅಂಬೇಡ್ಕರ್​ ಭವನ ಹಾಗೂ ವಾಲ್ಮೀಕಿ ಭವನದ ಕಟ್ಟಡ ಕಾಮಗಾರಿ ವಿಳಂಬದ ಕುರಿತು ದೂರು ಬಂದಿವೆ. ಶ್ರೀವೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆ: ಮಳೆಗಾಲ ಆರಂಭವಾಗಿದ್ದು, ಶುದ್ಧ ಕುಡಿಯುವ ನೀರಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಔಷಧ ಲಭ್ಯವಿರುವ ಜತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಕ್ರಮವಹಿಸಬೇಕು. ಪಟ್ಟಣದ ಹಗ್ಗ ದೇವರ ಓಣಿಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಬೇಡಿಕೆ ಇದೆ. ಹೀಗಾಗಿ, ಮಟನ್​ ಮಾರ್ಕೆಟ್​ ಮಳಿಗೆ ಜಾಗ ಅಂಗನವಾಡಿಗೆ ಹಸ್ತಾಂತರಿಸಬೇಕು. ರೈತರಿಗೆ ಯೂರಿಯಾ ಗೊಬ್ಬರ ಬೇಡಿಕೆಗೆ ಅನುಗುಣವಾಗಿ ಪೂರೈಸಬೇಕು ಎಂದು ತಿಳಿಸಿದರು.

ಅಕ್ರಮ ಮದ್ಯ ಮಾರಿದರೆ ಕ್ರಮ: ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮವಹಿಸಿಲ್ಲ ಏಕೆ? ಎಂದು ಅಬಕಾರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಡಿಡಿಪಿಐಯಾಗಿ ಪದೋನ್ನತಿ ಹೊಂದಿದ ಬಿಇಒ ಮೋಹನ ದಂಡಿನ, ಮುಖ್ಯಮಂತ್ರಿ ಪದಕ ಪುರಸತ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ಅವರನ್ನು ಸನ್ಮಾನಿಸಲಾಯಿತು. ತಾಪಂ ಇಒ ಆನಂದ ಬಡಕುಂದ್ರಿ, ತಹಸೀಲ್ದಾರ್​ ಎಂ.ವಿ.ಗುಂಡಪ್ಪಗೋಳ, ಪಿಐ ಧರ್ಮಾಕರ ಧರ್ಮಟ್ಟಿ, ಬಿಇಒ ಮೋಹನ ದಂಡಿನ, ವೈದ್ಯಾಧಿಕಾರಿ ಎಚ್​.ಎಂ.ಮಲ್ಲನಗೌಡರ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net