ಮೇಲ್ಮಠದಲ್ಲಿ ದಾರಿದೀಪ ಅಳವಡಿಸಿ

hbr
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ ಕಬ್ಬಿನಾಲೆ ನೀರಾಣಿ, ಮೇಲ್ಮಠ ಪ್ರದೇಶದಲ್ಲಿ ದಾರಿದೀಪ ಅಳವಡಿಸಬೇಕಿದ್ದು, ಹಗಲು ವೇಳೆ ಅನಾವಶ್ಯಕವಾಗಿ ಬೀದಿದೀಪ ಉರಿಯದಂತೆ ನಿರ್ವಹಿಸಬೇಕು. ಜತೆಗೆ ಬೆಳೆನಾಶ ಪರಿಹಾರ ಶೀಘ್ರವೇ ನೀಡಬೇಕು ಎಂದು ಕಬ್ಬಿನಾಲೆ ರಘುರಾಮ ಗೌಡ, ಶ್ಯಾಮ ಶೆಟ್ಟಿ ಪಟ್ಟು ಹಿಡಿದರು. ಮುದ್ರಾಡಿ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜರುಗಿದ ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮಸಭೆಯಲ್ಲಿ ಅವರು ಮಾತನಾಡಿ, ಬಹುಗ್ರಾಮ ನೀರಿನ ಯೋಜನೆ ಅನ್ವಯ ಕೊಂಕಣಾರ ಬೆಟ್ಟುವಿನ ಮಾರ್ಗದಲ್ಲಿ ತೋಡಿದ ಗುಂಡಿಯನ್ನು ಪುನಃ ಮುಚ್ಚದೆ ನಿರ್ಲಕ್ಷೃ ವಹಿಸಲಾಗಿದ್ದು, ನೀರು ಮಾರ್ಗ ಮಧ್ಯದಲ್ಲೇ ಹರಿದು ಪೋಲಾಗುತ್ತಿದೆ. ಶೀಘ್ರವೇ ಕೊಳೆರೋಗದ ಪರಿಹಾರವನ್ನೂ ವಿತರಿಸಬೇಕು ಎಂದರು. ಗ್ರಾಮಸ್ಥರೂ ಬೆಂಬಲಿಸಿದರು. ನೋಡಲ್ ಅಧಿಕಾರಿ ರಾಘವೇಂದ್ರ ಆಚಾರ್ಯ, ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ರಾವ್, ಗ್ರಾ.ಪಂ. ಅಧ್ಯಕ್ಷೆ ವಸಂತಿ ಪೂಜಾರಿ, ಉಪಾಧ್ಯಕ್ಷೆ ರಮ್ಯಕಾಂತಿ, ಪಿಡಿಓ ಅಮೃತಾ ಕುಲಾಲ್, ಕಾರ್ಯದರ್ಶಿ ಶೋಭವತಿ, ಗ್ರಾಮಾಡಳಿತ ಅಧಿಕಾರಿ ನವೀನ್ ಕುಮಾರ್, ಸದಸ್ಯರಾದ ಮಂಜುನಾಥ ಹೆಗ್ಡೆ, ಶುಭದರ ಶೆಟ್ಟಿ, ಸನತ್ ಕುಮಾರ್, ಸಂತೋಷ ಕುಮಾರ್ ಶೆಟ್ಟಿ, ಜಗದೀಶ ಪೂಜಾರಿ, ರತ್ನಾ ಪೂಜಾರಿ, ಜಯಂತಿ ಗೌಡ, ನಾಗಶ್ರೀ, ಶಾಂತ ದಿನೇಶ ಪೂಜಾರಿ, ವನಿತಾ ಎನ್.ರಾವ್, ಪಲ್ಲವಿ ಎಸ್.ಆರ್., ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಸಿಬ್ಬಂದಿ ಪದ್ಮನಾಭ ಕುಲಾಲ್ ವರದಿ ಮಂಡಿಸಿದರು.

ಅಧಿಕಾರಿಗಳಿಗೆ ಗೌರವಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಹೆಬ್ರಿ ವಲಯ ಯೋಜನಾಧಿಕಾರಿ ಲೀಲಾವತಿ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸಿದ್ದಪ್ಪ ಬಿ., ಜಾನುವಾರು ಅಭಿವೃದ್ಧಿ ಅಧಿಕಾರಿ ನಾಗೇಶ್ ಪೈ. ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net