ಇನ್‌ಸ್ಟಾಗ್ರಾಮ್ ಯುವತಿ ಹೆಸರಿನಲ್ಲಿ ವಂಚನೆ

fraud
Published on

ಉಡುಪಿ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯಿಂದಾಗಿ ಯುವಕನೊಬ್ಬ 58 ಸಾವಿರ ರೂ. ಕಳೆದುಕೊಂಡಿದ್ದಾನೆ.

ಬೆರ್ನಿಟ್ ವಿನ್ಸೆಂಟ್ ಎಂಬಾಕೆ ಸುಮಾರು 15-20 ದಿನ ಹಿಂದೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ನಾಗೂರು ನಿವಾಸಿ ನಾಗರಾಜ ಪೂಜಾರಿ ಎಂಬುವರನ್ನು ಪರಿಚಯಿಸಿಕೊಂಡಿದ್ದಳು. ತಾನು ಲಂಡನ್ ಡಬ್ಲೂೃಎಚ್‌ಒ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದ ಆಕೆ ವಾಟ್ಸ್‌ಅಪ್ ಚಾಟಿಂಗ್ ಮೂಲಕ ಭಾರತಕ್ಕೆ ಬಂದು ಹೂಡಿಕೆ ಮಾಡುವುದಾಗಿ ನಂಬಿಸಿದ್ದಳು.

ಸೆ.15ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ದೆಹಲಿ ಏರ್‌ಪೋರ್ಟ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡು ಬೆರ್ನಿಟ್ ಅವರ ಡಿ.ಡಿ.ಯ ರಿಜಿಸ್ಟ್ರೇಶನ್ ಬಾಬ್ತು 58,800 ರೂ. ದೆಹಲಿಯ ಐಡಿಬಿಐ ಬ್ಯಾಂಕ್‌ನ ಖಾತೆಗೆ ಕೂಡಲೇ ಜಮೆ ಮಾಡುವಂತೆ ತಿಳಿಸಿದ್ದಾನೆ. ಇದನ್ನು ನಂಬಿದ ನಾಗೇಶ್ ಪೂಜಾರಿ, ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದು, ಪುನಃ ಕರೆ ಮಾಡಿ ಕೋವಿಡ್ ಟೆಸ್ಟ್‌ಗಾಗಿ 45,500 ರೂ. ಪಾವತಿಸುವಂತೆ ತಿಳಿಸಿದ್ದಾನೆ.

ಇದೊಂದು ಮೋಸದ ಜಾಲ ಎಂಬುದಾಗಿ ಮನವರಿಕೆ ಮಾಡಿಕೊಂಡ ನಾಗೇಶ್ ಪೂಜಾರಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net