ಯುವ ಸಮುದಾಯಕ್ಕೆ ತಮ್ಮ ಚಿಂತನೆಗಳಿಂದಲೇ ಸ್ಫೂರ್ತಿ

Inspiring the youth community with their own thoughts
ಇಂಡಿ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ.ರಾಮನ್​ ಮಹಾವಿದ್ಯಾಲಯಲ್ಲಿ ಮಹಾಪರಿನಿರ್ವಾಣ ದಿವಸ ಆಚರಿಸಲಾಯಿತು. ಕಾಲೇಜಿನ ಅಧ್ಯ ಶಿವಾನಂದ ಕಾಮಗೊಂಡ, ಮಹಾವೀರ ವರ್ಧಮಾನ, ಶೈಲೇಶ ಬೀಳಗಿ, ಸನ್ಮತಿ ಹಳ್ಳಿ, ಪ್ರಸನ್ನಕುಮಾರ ನಾಡಗೌಡ ಇತರರಿದ್ದರು.
Published on

ಇಂಡಿ: ಮಹಾಪರಿನಿರ್ವಾಣ ದಿವಸವು ಭಾರತೀಯ ಸಂವಿಧಾನ ಪಿತಾಮಹ ಡಾ. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ ಪುಣ್ಯ ತಿಥಿಯನ್ನು ಸೂಚಿಸುತ್ತದೆ ಎಂದು ಸಿ.ವಿ. ರಾಮನ್​ ಕಾಲೇಜಿನ ಅಧ್ಯ ಶಿವಾನಂದ ಕಾಮಗೊಂಡ ಹೇಳಿದರು.

ಮಹಾಪರಿನಿರ್ವಾಣ ದಿವಸದ ಪ್ರಯುಕ್ತ ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರು ಸಿ.ವಿ. ರಾಮನ್​ ಕಾಲೇಜಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್​ ಅವರ ಕುರಿತು ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ ಅಬೇಡ್ಕರ್​ ಯುವ ಸಮುದಾಯಕ್ಕೆ ತಮ್ಮ ಚಿಂತನೆಗಳಿಂದಲೇ ಸ್ಫೂರ್ತಿಯಾಗಿದ್ದಾರೆ ಎಂದರು.

ವಿದ್ಯಾರ್ಥಿಗಳಾದ ದರ್ಶನ ಶಿವಶರಣ ಹಾಗೂ ಪ್ರತಿಭಾ ಮಾದರ ಅಂಬೇಡ್ಕರ್​ ಕುರಿತು ಮಾತನಾಡಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ವರ್ಧಮಾನ, ಶೈಲೇಶ ಬೀಳಗಿ, ಸನ್ಮತಿ ಹಳ್ಳಿ, ಪ್ರಸನ್ನಕುಮಾರ ನಾಡಗೌಡ, ಶೋಭಾ ನಾರಾಯಣಕರ್​, ಶೆಲಜಾ ಜಾಗೀರದಾರ, ಸಾರ್ವಭೌಮ ಸಾಳುಂಕೆ, ಶಿವಪುತ್ರ ನಿಂಬಾಳಕರ್​, ಸುದೀಪ ದೇಸಾಯಿ, ಆಕಾಶ ಕಲ್ಯಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net