ಯೋಧ ಕೆ.ದೀಪಕ್ ಆದರ್ಶ ಮೈಗೊಡಿಸಿಕೊಳ್ಳಿ

8ldh1 (1)
Published on

ಲಿಂಗದಹಳ್ಳಿ: ಭಾರತೀಯ ಸೇನೆಯ ಬ್ಲಾಕ್ ಕ್ಯಾಂಟ್ ಕಮ್ಯಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ತಣಿಗೆಬೈಲು ಗ್ರಾಮದ ವೀರಯೋಧ ದಿ.ಕೆ.ದೀಪಕ್ ಅವವರ ಸಾವಿನಿಂದ ದೇಶಕ್ಕೆ ತುಂಬಾಲಾರದ ನಷ್ಟ ಉಂಟಾಗಿದೆ ಎಂದು ಭದ್ರ ವನ್ಯ ಜೀವಿ ತಣಿಗೆಬೈಲು ವಯಲ ಅರಣ್ಯಾಧಿಕಾರಿ ಸುಧಾಕರ್ ಹೇಳಿದರು.

ತಣಿಗೆಬೈಲು ಹೊರ ವಲಯದ ರುದ್ರಭೂಮಿಯಲ್ಲಿ ನಿರ್ಮಿಸಿರುವ ದಿ.ಕೆ.ದೀಪಕ್ ಅವರ ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸೇನಾ ಕಮ್ಯಾಂಡೋಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ರಜೆಯಲ್ಲಿ ಊರಿಗೆ ಬಂದಾಗ ತಣಿಗೆಬೈಲು ಹಾಗೂ ಸುತ್ತಮುತ್ತಲ ಗ್ರಾಮದ ಯುವಕರಿಗೆ ಭಾರತೀಯ ಸೇನೆ ಬಗ್ಗೆ ವಿವರ ಮಾಹಿತಿ ನೀಡಿ ಯುವಕರು ಸೇನೆಗೆ ಸೇರಿ ದೇಶ ಸೇವೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದರು ಎಂದರು.

ದೀಪಕ್ ಅವರ ಪಾಲಕರಾದ ಟಿ.ಕೃಷ್ಣಮೂರ್ತಿ, ಎನ್.ಜಿ ಭುವನೇಶ್ವರಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ,

ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ಉಪಾಧ್ಯಕ್ಷ ಆರ್.ಮುರುಗ, ಪಿಡಿಒ ಟಿ.ಶಿವಮೂರ್ತಿ, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಜೆ.ಭದ್ರೇಗೌಡ, ಸದಸ್ಯ ರಮೇಶ್, ಪಿಡಿಒ ಎನ್.ಎಸ್.ನಾಗರಾಜಪ್ಪ, ದೀಪಕ್ ಬಾಯ್ಸ ಬಳಗ ಅಧ್ಯಕ್ಷ ತೌಫಿಕ್, ಅಭಿಷೇಕ್, ಆರ್.ಸತ್ಯಪ್ಪ, ಕಮ್ಯಾಂಡೋಗಳಾದ ಜಯದಯಾಳ್, ಮಹೇಶಪ್ಪ, ಚರಣ್‌ರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net