ಅಮೃತ ಭಾರತಿ ವಿದ್ಯಾಲಯದ ಪ್ರಣಾಮ್‌ಗೆ ಇನ್‌ಸ್ಪೈರ್ ಅವಾರ್ಡ್

award
ವಿಜ್ಞಾನ ಮಾದರಿ ತಯಾರಿ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್‌ನಲ್ಲಿ ಆಯ್ಕೆಯಾದ ಅಮೃತ ಭಾರತಿ ವಿದ್ಯಾಲಯದ ಪ್ರೌಢಶಾಲೆಯ ವಿದ್ಯಾರ್ಥಿಗಳು
Published on

ಹೆಬ್ರಿ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಲಯದ ಪ್ರೌಢಶಾಲೆಯ ಪ್ರಣಾಮ್ ಜಿ.ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾಮಟ್ಟಕ್ಕೆ 133, ರಾಜ್ಯಮಟ್ಟಕ್ಕೆ 13 ವಿದ್ಯಾರ್ಥಿಗಳ ಮಾದರಿ ಆಯ್ಕೆಯಾಗಿದ್ದವು. ಅದರಲ್ಲಿ ಹೆಬ್ರಿ ತಾಲೂಕಿನ ಅಮೃತ ಭಾರತಿ ವಿದ್ಯಾಲಯದ ಪ್ರಣಮ್ ಅವರ ಮಲ್ಟಿ ಪರ್ಪಸ್ ರೋವರ್ ಯಂತ್ರ ಗಮನ ಸೆಳೆದಿದ್ದಾರೆ.

ಮಾದರಿ ತಯಾರಿಗೆ ಸಹಾಯಕನಾಗಿ ಪವನ್ ಹೆಬ್ಬಾರ್ ಸಹಕರಿಸಿದ್ದಾರೆ. ವಿಜ್ಞಾನ ಶಿಕ್ಷಕರು ತರಬೇತಿ ನೀಡಿದ್ದಾರೆ. ಅವರನ್ನು ಸಂಸ್ಥೆ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net