ಆತ್ಮ ಗೌರವದ ಬದುಕಿಗೆ ಪ್ರೇರಣೆ

Inspiration for a life of self-respect
ವಿಜಯಪುರ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ರಿಜೇಶ ಪಿ.ಎನ್​., ಕಮರ್​ಪಾರಾ ಖಾಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕನ್ನಡ ಸಾಹಿತ್ಯದಲ್ಲಿ ಪರಧರ್ಮ ಪರ ವಿಚಾರಗಳನ್ನು ಸ್ಮರಿಸುವ ಸಹಿಷ್ಣುತೆಯನ್ನು ಸಾರುತ್ತ ಕುಲದ ಮರು ವ್ಯಾಖ್ಯಾನ ಮಾಡಿ ಸಾಮಾನ್ಯನಿಗೆ ಆತ್ಮ ಗೌರವದಿಂದ ಬದುಕುವಂತೆ ಕನಕದಾಸರ ಕೀರ್ತನೆಗಳು ಮಾಡಿವೆ ಎಂದು ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆ ಪ್ರಾಚಾರ್ಯ ರಿಜೇಶ ಪಿ.ಎನ್​., ಹೇಳಿದರು.

ನಗರದ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಸಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಇಂದಿನ ಯುವಜನತೆಗೆ ಭಕ್ತ ಕನಕದಾಸರ ಕೃತಿಗಳ ಮೌಲ್ಯಗಳು ಅವಶ್ಯಕ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮಗಳು ನೆರವೇರಿದವು. ಶೈಕ್ಷಣಿಕ ಕಾರ್ಯ ಸಂಯೋಜಕಿ ಕಮರ್​ಪಾರಾ ಖಾಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net