ಇಂಟರ್ನೆಟ್ ಬ್ಯಾಂಕಿ೦ಗ್ ವ್ಯವಸ್ಥೆಯ ದುರ್ಬಳಕೆ; ಇನ್‌ಸ್ಪೆಕ್ಟರ್ ಖಾತೆಯಲ್ಲಿದ್ದ ಹಣ ವರ್ಗಾವಣೆ

shutterstock_1703023246
Published on

ಧಾರವಾಡ: ತಾಂತ್ರಿಕತೆಯ ದುರುಪಯೋಗಪಡಿಸಿಕೊಂಡು ಜನಸಾಮಾನ್ಯರ ಬ್ಯಾಂಕ್ ಖಾತೆಯಲ್ಲಿರುವ ಹಣ ವರ್ಗಾವಣೆ ಮಾಡಿಕೊಳ್ಳುವುದು ಸಾಮಾನ್ಯ. ವಿಚಿತ್ರ ಎಂದರೆ ಪೊಲೀಸ್ ಇನ್‌ಸ್ಪೆಕ್ಟರ್‌ವೊಬ್ಬರ ಖಾತೆಗೆ ಕನ್ನ ಹಾಕಿರುವ ದುರುಳರು 8.25 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ.
ಇಲ್ಲಿನ ಉಪನಗರ ಠಾಣೆಯ ಇನ್‌ಸ್ಪೆಕ್ಟರ್ ದಯಾನಂದ ಶೇಗುಣಸಿ ಅವರ ಖಾತೆಯಲ್ಲಿದ್ದ ಹಣವನ್ನು ಅವರ ಗಮನಕ್ಕೆ ಬಾರದಂತೆ ವರ್ಗಾಯಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಯಾರ ಬಳಿಯೂ ಖಾತೆಯ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ಲಪಟಾಯಿಸಲಾಗಿದೆ. ಬ್ಯಾಂಕ್ ಖಾತೆಗೆ ಲಿಂಕ್ ಇದ್ದ ಮೊಬೈಲ್ ಸ್ವಿಚ್‌ಆಫ್ ಇದ್ದುದರಿಂದ ತಡವಾಗಿ ಅವರ ಗಮನಕ್ಕೆ ಬಂದಿದೆ. ಇಂಟರ್‌ನೆಟ್ ಬ್ಯಾಂಕಿ೦ಗ್ ಮೂಲಕ ಹಂತಹ೦ತವಾಗಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಇನ್‌ಸ್ಪೆಕ್ಟರ್ ದಯಾನಂದ ಅವರು ಹುಬ್ಬಳ್ಳಿಯ ಸೈಬರ್ ಕ್ರೆÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net