"ನಿಮ್ಮ ಪುಂಗಿ ನಡಯಂಗಿಲ್ಲ'

h9- Ganesh 1
Published on

ಹುಬ್ಬಳ್ಳಿ: "ನೀವು ಹೇಳೋದು ಎಲ್ಲ ಪುಂಗಿ ನಮ್ಮ ಪುಂಗಿ ಮುಂದೆ ನಿಮ್ಮ ಪುಂಗಿ ನಡೆಯಂಗಿಲ್ಲ' ಎಂದು ಡಿಜೆ ಹಚ್ಚುವ ಕುರಿತು ಗಣೇಶೋತ್ಸವ ಶಾಂತಿ ಸಭೆಯಲ್ಲಿ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್​ ಶ್ಯಾಮರಾವ ಸಜ್ಜನ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್​ ಆಗಿದೆ.
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸುಪ್ರೀಂಕೋರ್ಟ್​ ಆದೇಶ ಮೀರಿ ಡಿಜೆಗೆ ಅವಕಾಶ ನೀಡುವುದಿಲ್ಲ. ನಾವು ನಮ್ಮ ಪುಂಗಿ ಊದುತ್ತೇನೆ. ನಮ್ಮ ಪಿಂಗಿ ಮುಂದೆ ನಿಮ್ಮ ಪುಂಗಿ ನಿಲ್ಲಲ್ಲ. ನಾಳೆ ನಡೆಯಲಿಲ್ಲ ಎಂದರೂ ನಂತರ ಕೋರ್ಟ್​ನಿಂದ ಸಮನ್ಸ್​ ಬರುತ್ತಲ್ಲ. ನೀವು ಡಿಜೆ ಹಚ್ಚಿದರೆ ಜೇಬಲ್ಲಿ ಇಟ್ಟುಕೊಂಡು ಹಚ್ಚುತ್ತೀರಾ ? ಯಾವ ಡಿಜೆ ? ಅದರ ಮಾಲೀಕ ಯಾರು ? ಆಪರೇಟರ್​ ಯಾರು ? ಟ್ರಾ$್ಯಕ್ಟರ್​ ಮಾಲೀಕ, ಚಾಲಕ ಯಾರು ? ಎಂಬ ಎಲ್ಲ ಮಾಹಿತಿ ಗೊತ್ತಾಗುತ್ತೆ. ನಂತರ ಸಮಸ್ಯೆ ಸೃಷ್ಟಿಯಾಗುತ್ತೆ ಎಂದು ಸಜ್ಜನ ಅವರು ಡಿಜೆ ಬೇಕೇ ಬೇಕು ಎಂಬ ಯುವಕರಿಗೆ ಎಚ್ಚರಿಕೆ ನೀಡಿದ್ದ ವಿಡಿಯೋ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net