

ಬೆಳಗಾವಿ: ಕೆನಡಾದ ವಿನಿಪೆಗ್ ನಗರದಲ್ಲಿ ಜು.28ರಿಂದ ಆರಂಭವಾಗಿರುವ ‘ವರ್ಲ್ಡ್ ಪೊಲೀಸ್ ಆ್ಯಂಡ್ ಫೈರ್ ಗೇಮ್ಸ್’ನಲ್ಲಿ 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬೆಳಗಾವಿಯ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ನಿರಂಜನ ಪಾಟೀಲ ಅವರು ಹಾಫ್ ಮ್ಯಾರಥಾನ್ 21 ಕಿ.ಮೀ. ಓಟವನ್ನು 1 ಗಂಟೆ 54 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲಿನ ಚಳಿಗೆ ಹೊಂದಿಕೊಂಡು ಓಡುವುದು ಅವರಿಗೆ ಕಷ್ಟವಾಗಿತ್ತು. 14 ಕಿ.ಮೀ. ಓಡಿದ ಬಳಿಕ ಕಾಲಿನ ಸ್ನಾಯು ಸೆಳೆತ ಉಂಟಾಗಿತ್ತು, ಆದರೂ ಛಲ ಬಿಡದೆ ಓಟ ಪೂರ್ಣಗೊಳಿಸಿ, ಜಾಗತಿಕ ವೇದಿಕೆಯಲ್ಲಿ ಭಾರತ ಪ್ರತಿನಿಧಿಸಿದ ಕರ್ನಾಟಕದವರು ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಧುನಿಕ ಜಗತ್ತಿನ ಪೊಲೀಸ್ ವ್ಯವಸ್ಥೆಯನ್ನು ಕ್ರೀಡೆಯ ಮೂಲಕ ಒಗ್ಗೂಡಿಸುವ ಕಾರ್ಯ ವಿಧಾನವೇ ‘ವರ್ಲ್ಡ್ ಪೊಲೀಸ್ ಆ್ಯಂಡ್ ಫೈರ್ ಗೇಮ್ಸ್’ ಆಗಿದೆ. ಈ ಕ್ರೀಡೆಯಲ್ಲಿ ಭಾರತದ ಪರವಾಗಿ ಭಾಗವಹಿಸಿದ 40 ಆಟಗಾರರ ಪೈಕಿ ಕರ್ನಾಟಕದ ನಿವೃತ್ತ ಡಿಜಿಪಿ ಕೃಷ್ಣಮೂರ್ತಿ, ನಿವೃತ್ತ ಎಡಿಜಿಪಿ ಬಿ.ಎನ್.ಎಸ್. ರೆಡ್ಡಿ, 99ರ ಬ್ಯಾಚ್‌ನ ಡಿಎಸ್‌ಪಿ (ಲೋಕಾಯುಕ್ತ) ಟೆನ್ನಿಸ್ ಭಾಗವಹಿಸಿದ್ದರು.