ನೀರು ಸರಬರಾಜು ಕಾಮಗಾರಿ ಪರಿಶೀಲನೆ

18
Published on

ಉಂಡುವಾಡಿಯಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕಾಮಗಾರಿಯನ್ನು ನಗರಪಾಲಿಕೆ ವರ್ಕ್ಸ್ ಸಮಿತಿ ಸದಸ್ಯರು ಪರಿಶೀಲಿಸಿದರು.

ಕಾಮಗಾರಿ ಆರಂಭವಾಗಿ ಕೆಲವು ತಿಂಗಳುಗಳೇ ಕಳೆದಿದ್ದರೂ ತ್ವರಿತವಾಗಿ ಮುಗಿಸದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ವ್ಯಾಪಕ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆಗಿಳಿದ ಸಮಿತಿಗೆ ಸಮಸ್ಯೆಯ ಪರಿಚಯವಾಯಿತು.


ನಗರದ ಒಂಟಿಕೊಪ್ಪಲು ಬಡಾವಣೆಯ ಕಾಂಟೂರ್ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಸಮಿತಿಗೆ ಕಾಮಗಾರಿ ವಿಳಂಬದ ಪ್ರತ್ಯಕ್ಷ ದರ್ಶನವಾಗಿತ್ತಲ್ಲದೇ, ಇದರಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿರುವುದು ಮನವರಿಕೆಯಾಯಿತು.


ಈ ವೇಳೆ ಸಮಿತಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ತಕ್ಷಣ ಕಾಮಗಾರಿ ವೇಗವನ್ನು ಹೆಚ್ಚಿಸಬೇಕು. ರಸ್ತೆಯಲ್ಲಿ ಗುಂಡಿ ಇರದಂತೆ ಸಮತಟ್ಟು ಮಾಡಬೇಕು. ನಂತರ ನಿಗದಿತ ಕಾಲಮಿತಿಯೊಳಗೆ ರಸ್ತೆಗೆ ಡಾಂಬರು ಹಾಕಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಿರ್ದೇಶಿಸಿದರು.


ಸಮಿತಿ ಅಧ್ಯಕ್ಷೆ ಶಾಂತಕುಮಾರಿ, ಸದಸ್ಯರಾದ ಕೆ.ವಿ.ಶ್ರೀಧರ್, ಲೋಕೇಶ್, ಸಾತ್ವಿಕ್, ಪಲ್ಲವಿ ಬೇಗಂ ಹಾಗೂ ನಗರಪಾಲಿಕೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net