ಶಾಲಾ ವಾಹನಗಳ ತಪಾಸಣೆ

h21-school vehicle
Published on

ಹುಬ್ಬಳ್ಳಿ: ಉತ್ತರ ಸಂಚಾರ ವಿಭಾಗದಿಂದ ಐದು ದಿನಗಳಿಂದ ಶಾಲಾ ವಾಹನಗಳ ತಪಾಸಣೆ ನಡೆಸಿ ಮಿತಿ ಮೀರಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದರೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

ಮಿರಜಾನಕರ ರೋಡ್, ಅಕ್ಷಯ ಪಾರ್ಕ್ ಸರ್ಕಲ್, ದೇಶಪಾಂಡೆ ನಗರ, ಸಿದ್ಧಾರೂಢ ನಗರ ರೋಡ್ ಸೇರಿದಂತೆ ಇತರೆಡೆ ತಪಾಸಣೆ ಪ್ರಕ್ರಿಯೆ ನಡೆದಿದೆ. ಇದುವರೆಗೆ ಒಟ್ಟು 370ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಲಾಗಿದೆ. ದಾಖಲಾತಿಗಳನ್ನು ಪರಿಶೀಲಿಸಿದ್ದಲ್ಲದೆ, ಮಿತಿ ಮೀರಿ ಮಕ್ಕಳನ್ನು ತುಂಬಿಕೊಂಡು ಹೊರಟ್ಟಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ಪಾಲಭಾವಿ, ಪಿಎಸ್‌ಐ ಮೋಹನ, ಎಎಸ್‌ಐಗಳಾದ ಎನ್.ಎಂ. ಕೂಡಲ, ಡಿ. ಅನ್ವರ ಹುಸೇನ್, ಎಂ.ವೈ. ಬಾಬಜಿ, ಸಿಬ್ಬಂದಿ ಬಸವರಾಜ ದಾಸ್ಕೊನವರ, ಎಂ.ಎಸ್. ನಿಡವಣಿ, ಎಚ್.ಎಂ. ನಾಯಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net