ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲನೆ

20240226_125705
Published on

ಮೂಗೂರು: ಮೂಗೂರು-ಬನ್ನಹಳ್ಳಿ ಹುಂಡಿ ಮತ್ತು ಮಾದಾಪುರ-ತಲಕಾಡು-ಸರಗೂರು ಹ್ಯಾಂಡ್ ಪೋಸ್ಟ್ ರಸ್ತೆ, ಮುಡುಕುತೊರೆ ಮತ್ತು ಕಾವೇರಿ ನದಿವರೆಗಿನ ರಸ್ತೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಮೂಗೂರು ಶೇಷಣ್ಣ ನೀಡಿದ ದೂರಿನನ್ವಯ ಮುಖ್ಯ ಅಭಿಯಂತರ ಕಚೇರಿ, ಕರ್ನಾಟಕ ಲೋಕಾಯುಕ್ತ ಬೆಂಗಳೂರಿನಿಂದ ಆಗಮಿಸಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ತನಿಖಾಧಿಕಾರಿಗಳು ರಸ್ತೆಯ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆರ್‌ಟಿಐ ಕಾರ್ಯಕರ್ತ ಮೂಗೂರು ಶೇಷಣ್ಣ ಮಾತನಾಡಿ, ನಾನು ನೀಡಿದ ದೂರಿನನ್ವಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಂದಾಜು ಪಟ್ಟಿ, ಕಾಮಗಾರಿಗೆ ಬಳಸಿರುವ ವಸ್ತುಗಳ ಗುಣಮಟ್ಟವನ್ನು ಪರೀಕ್ಷೆ ಮಾಡಿ ವರದಿ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಲಗೂಡು ಸಿದ್ದಪ್ಪ, ಕೇತಳ್ಳಿ ಪ್ರಶಾಂತ್, ಸೋಸಲೆ ಗಂಗಾಧರ್, ಗೆಜ್ಜಿಗನಹಳ್ಳಿ ಜಯರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net