

ಚನ್ನರಾಯಪಟ್ಟಣ: ರೈತರು ಜಮೀನುಗಳಲ್ಲಿ ಕೊರೆಸಿರುವ ಹಳೆಯ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ನಾಗಪ್ಪ ತಿಳಿಸಿದರು.
ಹೋಬಳಿಯ ಮಲ್ಲೇನಹಳ್ಳಿ ಮಂಗಳವಾರ ಹಳೆಯ ಕೊಳವೆ ಬಾವಿ ಪರಿಶೀಲಿಸಿ ಮಾತನಾಡಿದರು. ಅಟಲ್ ಭೂ ಜಲ ಯೋಜನೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಪರಿಶೀಲನೆ ಮಾಡಲಾಗುತ್ತಿದ್ದು, ಕೊಳವೆ ಬಾವಿಗಳ ಅಕ್ಕಪಕ್ಕದಲ್ಲಿ ಕೆರೆಕುಂಟೆಗಳು ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕೊಳವೆ ಬಾವಿಗಳಲ್ಲಿ ನೀರಿನಮಟ್ಟ ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ ಎಂದರು.