ಹೈಟೆಕ್ ತರಕಾರಿ ಮಾರುಕಟ್ಟೆ ಕಾಮಗಾರಿ ಪರಿಶೀಲನೆ

Inspection of Hi-tech vegetable market work
Published on

ನರಗುಂದ: ಪಟ್ಟಣದಲ್ಲಿ 1.30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ನೂತನ ಹೈಟೆಕ್ ತರಕಾರಿ ಮಾರುಕಟ್ಟೆ ಕಾಮಗಾರಿಯನ್ನು ಶಾಸಕ ಸಿ.ಸಿ. ಪಾಟೀಲ ಗುರುವಾರ ಪರಿಶೀಲಿಸಿದರು.

ಪುರಸಭೆ ಅಧಿಕಾರಿ ಸಿಬ್ಬಂದಿ, ಗುತ್ತಿಗೆದಾರ ಹಾಗೂ ತರಕಾರಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮಂದಗತಿಯಲ್ಲಿ ಸಾಗುತ್ತಿರುವ ನೂತನ ತರಕಾರಿ ಮಾರುಕಟ್ಟೆ ಕಾಮಗಾರಿಯಿಂದ ನಗರದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪರಿಣಾಮ ಸಣ್ಣ ಪುಟ್ಟಕೆಲಸ ಕಾರ್ಯಗಳಿಗೆ ತೆರಳುವ ವಾಹನ ಸವಾರರು, ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ. ನಗರದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಹಿತದೃಷ್ಟಿಯಿಂದ ತರಕಾರಿ ಮಾರುಕಟ್ಟೆ, ಸಮುದಾಯ ಶೌಚಗೃಹ, ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಯನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ನೂತನ ತರಕಾರಿ ಮಾರುಕಟ್ಟೆಯಲ್ಲಿ ವಾರದ ಏಳು ದಿನ ವ್ಯಾಪಾರ ವಹಿವಾಟು ನಡೆಸುವ 34 ವ್ಯಾಪಾರಸ್ಥರಿಗೆ 8*10 ಅಳತೆಯ ಸ್ಟೋರೇಜ್ ಮಳಿಗೆ ನಿರ್ವಿುಸಿಕೊಡಬೇಕು. ಸ್ವಚ್ಛತೆ ದೃಷ್ಟಿಯಿಂದ ಮಾರುಕಟ್ಟೆ ಆವರಣದಲ್ಲಿ ಚರಂಡಿಗಳ ನಿರ್ವಣ, ವ್ಯಾಪಾಸ್ಥರು ಕುಳಿತುಕೊಳ್ಳಲು ಕಟ್ಟೆಗಳು, ಪ್ರತಿ ಎರಡು ಅಂಗಡಿಗಳ ಮದ್ಯ ಗ್ರಾಹಕರ ಸಂಚಾರಕ್ಕೆ 2 ಅಡಿ ರಸ್ತೆ, ಕುಡಿಯುವ ನೀರು, ಹೈಟೆಕ್ ಫ್ಯಾನ್, ಸಿಸಿಟಿವಿ ಕ್ಯಾಮರಾ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಜತೆಗೆ ಸರಿಯಾದ ಪ್ಲಾಟ್​ಫಾಮರ್್​ಗಳನ್ನು ನಿರ್ವಿುಸಿಕೊಡಬೇಕು. ಮಳೆ ನೀರು ಸರಾಗವಾಗಿ ಹರಿದುಹೋಗುವ ಎಲ್ಲ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷೆ ಕಾಶಮ್ಮ ಮಳಗಿ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಸಿದ್ದಪ್ಪ ಯಲಿಗಾರ, ಪವಾಡೆಪ್ಪ ವಡ್ಡಿಗೇರಿ, ಜಹಂಗೀರಖಾನ್ ಪಠಾಣ, ಉಮೇಶಗೌಡ ಪಾಟೀಲ, ನಾಗರಾಜ ನೆಗಳೂರ, ಹಸನ್ ನವದಿ, ಸೋಮು ಸೋನಾವನೆ, ಪುರಸಭೆ ವಿಪಕ್ಷ ನಾಯಕ ಅಪ್ಪಣಗೌಡ ನಾಯ್ಕರ್, ಶ್ರೀಕಾಂತ ನರಗುಂದ, ಬಸವರಾಜ ಮಳಗಿ, ಪ್ರಶಾಂತ ಜೋಶಿ, ಬೀರಪ್ಪ ಬಿದರಗಡ್ಡಿ, ಕಿರಣ ಮುಧೋಳೆ, ಸಂಗಮೇಶ ಬ್ಯಾಳಿ, ಶಿವಾನಂದ ಮುತವಾಡ,ಗುತ್ತಿಗೆದಾರ ಗೋಪಾಲಕೃಷ್ಣ ತಳ್ಳೂರಿ, ಶಬ್ಬೀರ, ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಶಾಮಲಾ, ಶರಣಪ್ಪ ಓಣೆ, ಇಂಜಿನಿಯರ್ ಮಹಮದ್, ರಘುರಡ್ಡಿ ಹಾಗೂ ತರಕಾರಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net