

ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಇಲ್ಲಿಯ ಹಳೆಯ ಬಸ್ ನಿಲ್ದಾಣ ಮುಂಭಾಗದ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಯಿತು. ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಬಂದೊದಗಬಹುದಾದ ಸಂಕಟ, ಸಂತೋಷಗಳ ಕುರಿತು ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸೆ. 3ರಿಂದ ಭಾಗಶಃ, 20ರಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ನಿರ್ಧರಿಸಲಾಯಿತು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಸಿ.ಆರ್. ರವೀಶ, ಎನ್‌ಎಚ್‌ಎಐ ಎಸ್‌ಇ ಟಿ. ಪ್ರದೀಪ, ತಹಸೀಲ್ದಾರ್ ಮಹೇಶ ಗಸ್ತೆ, ಎಇಇ ಸತೀಶ ನಾಗನೂರ, ರವಿ ನಾಯಕ್, ಇತರರು ಇದ್ದರು.