

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾಡಳಿತದ ವಿವಿಧ ಇಲಾಖೆಗಳ ತಂಡಗಳು ಬುಧವಾರ ಜಿಲ್ಲೆಯ ವಿವಿಧೆಡೆ ಸಂಚರಿಸಿ ಬೆಳೆ ಹಾನಿ, ಮನೆ ಹಾನಿಯನ್ನು ಪರಿಶೀಲಿಸಿದವು.
ಉಪ ವಿಭಾಗಾಽಕಾರಿ ಶಾಲಂ ಹುಸೇನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹಾಗೂ ತಹಸೀಲ್ದಾರರಿದ್ದ ಪ್ರತ್ಯೇಕ ತಂಡ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಕೆಲವೆಡೆ ಹೆಸರು, ಉದ್ದು, ಸೋಯಾಬಿನ್ ಬೆಳೆಗಳು ಕಟಾವು ಹಂತದಲ್ಲಿದ್ದು, ಹಾನಿಗೊಳಗಾಗಿರುವುದು ಗಮನಕ್ಕೆ ಬಂದಿತು.
* ಪರಿಹಾರದ ಭರವಸೆ:
ಬೆಳೆ ಹಾನಿಗೊಳಗಾದ ರೈತರಿಗೆ ನಿಯಮಾನುಸಾರ ಪರಿಹಾರ ಸಿಗುವಂತೆ ಕ್ರಮ ವಹಿಸಬೇಕು. ಅಽಕಾರಿಗಳು ರೈತರೊಂದಿಗೆ ಸಂಪರ್ಕದಲ್ಲಿದ್ದು, ಬೆಳೆಗಳಿಗೆ ರೋಗ ತಡೆ, ಹಾನಿಗದಂತೆ ಕೈಗೊಳ್ಳಬೇಕಾದ ಸಲಹೆ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಽಕಾರಿ ದಿವ್ಯ ಪ್ರಭು ನಿರ್ದೇಶನ ನೀಡಿದ್ದಾರೆ.