ಅಂಬೇಡ್ಕರ್ ಭವನ ಜಿಲ್ಲಾಧಿಕಾರಿ ಪರಿಶೀಲನೆ : ಅರ್ಧಕ್ಕೆ ನಿಂತಿರುವ ಕಾಮಗಾರಿ

dk dc
Published on

ಸುಳ್ಯ: ಕಾಮಗಾರಿ ಪ್ರಾರಂಭಗೊಂಡು ಅರ್ಧದಲ್ಲೇ ನಿಂತಿರುವ ಸುಳ್ಯದ ಅಂಬೇಡ್ಕರ್ ಭವನವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೋಮವಾರ ವೀಕ್ಷಿಸಿ ಕಾಮಗಾರಿ ಕುಂಠಿತವಾಗಲು ಕಾರಣ ಹಾಗೂ ಅಗತ್ಯ ಕ್ರಮಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಮೈಸೂರಿಗೆ ತೆರಳುವಾಗ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಯವರನ್ನು ದಲಿತ ಮುಖಂಡರು ಭೇಟಿಯಾಗಿ ಅಂಬೇಡ್ಕರ್ ಭವನ ವೀಕ್ಷಿಸುವಂತೆ ಮನವಿ ಮಾಡಿದರು. ವೀಕ್ಷಣೆಯ ಬಳಿಕ ಕಾಮಗಾರಿಯ ಅಂದಾಜು ವೆಚ್ಚ, ಮತ್ತಿತರ ಕಾಮಗಾರಿಗಳ ವಿವರವನ್ನು ಪರಿಶೀಲನೆ ಮಾಡುವುದಾಗಿ ಅವರು ದಲಿತ ಮುಖಂಡರಿಗೆ ತಿಳಿಸಿದರು.

ತಹಸೀಲ್ದಾರ್ ಜಿ.ಮಂಜುನಾಥ್, ಮುಖಂಡರಾದ ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತ್ತಡ್ಕ, ಅಚ್ಚುತ ಮಲ್ಕಜೆ, ಪರಮೇಶ್ವರ, ತೀರ್ಥಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net