

ಬಂಟ್ವಾಳ: ಅಜಿಲಮೊಗರು-ಕಡೇಶ್ವಾಲ್ಯ ಸೇತುವೆ ಕಾಮಗಾರಿಗೆ ವೇಗ ಕೊಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಾಜಿ ಸಚಿವ ಬಿ.ರಮಾನಾಥ ರೈ ಅವರೊಂದಿಗೆ ಅಜಿಲಮೊಗರಿಗೆ ತೆರಳಿ ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ಕೆಆರ್‌ಡಿಸಿಎಲ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಶಂಭೂರು ಡ್ಯಾಮ್‌ನಲ್ಲಿ ಹೆಚ್ಚಿನ ನೀರು ಸಂಗ್ರಹ ಇರುವುದರಿಂದ ಸೇತುವೆ ಪಿಲ್ಲರ್ ಕಾಮಗಾರಿ ನಡೆಸಲು ಅಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾದಾಗ, ಪ್ರಸ್ತುತ ಬೇಸಿಗೆ ಆಗಿರುವುದರಿಂದ ಈಗ ನೀರು ಬಿಡುವುದು ಅಸಾಧ್ಯ. ಆದರೆ ತುಂಬೆ ಡ್ಯಾಮ್‌ನಲ್ಲಿ ನೀರು ಕಡಿಮೆಯಾದರೆ ನೀರನ್ನು ಕೆಳಕ್ಕೆ ಹರಿಸಿದರೆ ಇಲ್ಲಿ ನೀರು ಕಡಿಮೆಯಾಗಿ ಕಾಮಗಾರಿ ನಡೆಸಬಹುದು. ಜತೆಗೆ ಹೆಚ್ಚುವರಿ ಮೊತ್ತದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಬೂಡಾ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ ಪಿ.ಜೆ, ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಆರ್‌ಐ ಜನಾರ್ದನ ಜೆ, ಕೆಆರ್‌ಡಿಸಿಎಲ್‌ನ ಇಇ ರಘು, ಎಇ ಭರತ್, ಕುಡಿಯುವ ನೀರು ವಿಭಾಗದ ಎಇಇ ನಟೇಶ್, ಎಇ ಜಗದೀಶ್ ನಿಂಬಾಲ್ಕರ್, ಬಂಟ್ವಾಳ ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್‌ಕುಮಾರ್ ಶೆಟ್ಟಿ, ಮಣಿನಾಲ್ಕೂರು ಪಂಚಾಯಿತಿ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶಿವಪ್ಪ ಪೂಜಾರಿ ಹಟ್ಟದಡ್ಕ, ಸದಸ್ಯೆ ಕಾಂಚಲಾಕ್ಷಿ ತಿಂಗಳಾಡಿ, ಮಾಜಿ ಸದಸ್ಯ ಆದಂ ಕುಂಞಿ, ಕಡೇಶ್ವಾಲ್ಯ ಗ್ರಾ.ಪಂ. ಸದಸ್ಯ ಹರಿಶ್ಚಂದ್ರ ಕಾಡಬೆಟ್ಟು, ಸಂಜೀವ ಪೂಜಾರಿ, ಚೆರಿಯೆ ಮೋನು, ನವೀನ್ ಕೊಡಂಗೆ, ಬಾಲಕೃಷ್ಣ ಕೊಟ್ಟುಂಜ ಮೊದಲಾದವರಿದ್ದರು.