ತಪಾಸಣೆ ಶಿಬಿರ ಯಶಸ್ವಿ

20SAVADATTI1
Published on

ಸವದತ್ತಿ: ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶ್ರೀ ಅರ್ಥೋಪೆಡಿಕ್ ಆಸ್ಪತ್ರೆ ವತಿಯಿಂದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಜರುಗಿತು.

ರೋಗಿಗಳಿಗೆ ಬಿಪಿ ಹಾಗೂ ಶುಗರ್ ತಪಾಸಣೆ ಜತೆಗೆ ಔಷಧ ಉಚಿತವಾಗಿ ವಿತರಿಸಲಾಯಿತು. ವೈದ್ಯೆ ನಯನಾ ಭಸ್ಮೆ, ವೈದ್ಯ ಹೇಮಂತ್ ಭಸ್ಮೆ ಜನರಿಗೆ ಮೂಳೆ ಸಾಂದ್ರತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಉದ್ದೇಶವಾಗಿ ಮಾತನಾಡಿದರು.

230ಕ್ಕಿಂತ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದರು. ಗ್ರಾಮದ ಮುಖಂಡ ಕೀರಪ್ಪ ಓಗಳಾಪುರ, ಗದಿಗೆಪ್ಪ ಕುಂಬಾರ, ಮಹದೇವ ಮೆಣಸಿನಕಾಯಿ, ಯಲ್ಲಪ್ಪ ಅಳಗೋಡಿ, ಈರಯ್ಯ ಹಿರೇಮಠ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net