ಜನತಾ ಬಡಾವಣೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ

01 yelandur 01
ಯಳಂದೂರು ಪಟ್ಟಣದ 9ನೇ ವಾರ್ಡಿನ ಜನತಾ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಗೃಹವನ್ನು ಪೌರಕಾರ್ಮಿಕರು ಸ್ವಚ್ಛ ಮಾಡಿದರು.
Published on

ಯಳಂದೂರು: ಪಟ್ಟಣದ ಜನತಾ ಬಡಾವಣೆಯಲ್ಲಿ ಕುಡಿಯುವ ನೀರು, ಚರಂಡಿ, ಶೌಚಗೃಹ ಹಾಗೂ ಕಸ ವಿಲೇವಾರಿ ಸೇರಿದಂತೆ ಇತರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಎಸ್‌ಡಿಎ ದೊಡ್ಡಬಸವಣ್ಣ ಮಾಹಿತಿ ನೀಡಿದರು.

ಪಟ್ಟಣದಲ್ಲಿ ತಲೆದೋರಿದ್ದ ಮೂಲಸೌಕರ್ಯ ಸಮಸ್ಯೆ ಹಿನ್ನೆಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಇಲ್ಲಿ ಸಮಸ್ಯೆಗಳದ್ದೇ ದರ್ಬಾರು! ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ವಾರ್ಡ್ ಪರಿಶೀಲನೆಗೆ ಸೂಚನೆ ನೀಡಿದ್ದರು. ಅದರಂತೆ ಸೋಮವಾರ ದೊಡ್ಡಬಸವಣ್ಣ ಪೌರ ಕಾರ್ಮಿಕರು ಜತೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.

ವಾರ್ಡಿನ ಕಸ ವಿಲೇವಾರಿ, ಕುಡಿಯುವ ನೀರಿನ ಪರೀಕ್ಷೆ, ಶೌಚಗೃಹ ಸ್ವಚ್ಛತೆ ಸೇರಿದಂತೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಪೌರಕಾರ್ಮಿಕರಿಂದ ಸ್ವಚ್ಛತೆ ಮಾಡಿಸಿದರು. ನಂತರ ಕುಡಿಯುವ ನೀರಿನಲ್ಲಿ ಹುಳುಗಳು ಬಂದಿವೆ ಎಂಬ ದೂರನ್ನು ಪರಿಗಣಿಸಿ ಪೈಪ್‌ಗಳನ್ನು ಪರಿಶೀಲಿಸಲಾಯಿತು. ಮನೆಯ ಸಂಪುಗಳಿಂದ ಹುಳುಗಳು ಬಂದಿರುವ ಶಂಕೆ ಇದ್ದು ಈ ಬಗ್ಗೆ ಸಂಪು ಹೊಂದಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net