ವಿವಿಧೆಡೆ ಶ್ವಾನದಳದಿಂದ ಪರಿಶೀಲನೆ

ಶಿವನಸಮುದ್ರ ಗ್ರಾಮದ ಹೊರವಲಯದಲ್ಲಿರುವ ಮಯೂರ ಹೋಟೆಲ್ ಹಿಂಭಾಗವಿರುವ ಪ್ರದೇ ಶದಲ್ಲಿ ಬಾಂಬ್ ಪತ್ತೆ ಶ್ವಾನದಳದಿಂದ ತಪಾಸಣೆ ನಡೆಯಿತು. ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಚೆಲುವರಾಜ್ ಇದ್ದರು.
ಶಿವನಸಮುದ್ರ ಗ್ರಾಮದ ಹೊರವಲಯದಲ್ಲಿರುವ ಮಯೂರ ಹೋಟೆಲ್ ಹಿಂಭಾಗವಿರುವ ಪ್ರದೇ ಶದಲ್ಲಿ ಬಾಂಬ್ ಪತ್ತೆ ಶ್ವಾನದಳದಿಂದ ತಪಾಸಣೆ ನಡೆಯಿತು. ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಚೆಲುವರಾಜ್ ಇದ್ದರು.
Published on

ಕೊಳ್ಳೇಗಾಲ: ಇತ್ತೀಚೆಗೆ ಸ್ಫೋಟಕ ತಿಂದು ಹಸುಗಳು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶಿವನಸಮುದ್ರದ ಸುತ್ತಮುತ್ತಲ ಪ್ರದೇಶ ಹಾಗೂ ಹನೂರಿನ ಆರ್.ಎಸ್.ದೊಡ್ಡಿಯಲ್ಲಿ ಬಾಂಬ್ ಪತ್ತೆ ಶ್ವಾನದಳ ತಪಾಸಣೆ ನಡೆಸಿತು.

ಶಿವನಸಮುದ್ರ ಗ್ರಾಮದ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿಗಳ ಬೇಟೆಗೆ ದುಷ್ಕರ್ಮಿಗಳು ಇಟ್ಟಿದ್ದ ಸಿಡಿಮದ್ದನ್ನು ಹಸುವೊಂದು ತಿಂದ ಪರಿಣಾಮ ಅದರ ಬಾಯಿ ಛಿದ್ರವಾಗಿ ಮೃತಪಟ್ಟಿತ್ತು. ಅಂತೆಯೇ, ಹನೂರು ತಾಲೂಕಿನ ಆರ್.ಎಸ್.ದೊಡ್ಡಿಯಲ್ಲಿ ಸಿಡಿಮದ್ದು ತಿಂದು ಹಸು ಮೃತಪಟ್ಟಿತ್ತು. ಸ್ಫೋಟಕ ಇಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಾನುವಾರುಗಳ ಮಾಲೀಕರು ಆಗ್ರಹಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಹಾಗೂ ಡಿವೈಎಸ್‌ಪಿ ಎಂ.ಧಮೇಂದ್ರ ಮಾರ್ಗದರ್ಶನ ದಂತೆ ಪೊಲೀಸ್ ಶ್ವಾನದಳ ಆರ್.ಎಸ್. ದೊಡ್ಡಿ ಸುತ್ತಮುತ್ತಲ ಸ್ಥಳಗಳು ಹಾಗೂ ಶಿವನಸಮುದ್ರ ಮಯೂರ ಹೋಟೆಲ್ ಹಿಂಭಾಗವಿರುವ ಪ್ರದೇಶ ಹಾಗೂ ಶಿಂಷಾ ಮಾರಮ್ಮನ ದೇವಾಲಯ, ಶ್ರೀ ಮದ್ಯರಂಗನಾಥ ಸ್ವಾಮಿ ದೇವಾಲಯ, ಶ್ರೀ ಸೋಮೇಶ್ವರ ದೇವಾಲಯ ಸಮೀಪ ಶಾನಗಳು ತಪಾಸಣೆ ನಡೆಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net