ನರೇಗಾ ಕಾಮಗಾರಿಗಳ ಪರಿಶೀಲನೆ, ರೀಡ್ ಸಂಸ್ಥೆ ಮುಖ್ಯಸ್ಥರಿಂದ ಕೇಂದ್ರದ ಯೋಜನೆಗಳ ಪ್ರಯೋಜನ ಮಾಹಿತಿ ಸಂಗ್ರಹ

Inspection at Kanakagiri
ರೀಡ್ ಸಂಸ್ಥೆಯ ಮುಖ್ಯಸ್ಥ ಡಾ.ದಾಯಕರ್ ರಡ್ಡಿ ಕನಕಗಿರಿ ತಾಲೂಕಿನ ಹುಲಿಹೈದರದಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಡಿ ಅನುಷ್ಠಾನಗೊಂಡ ಯೋಜನೆಗಳನ್ನು ಪರಿಶೀಲಿಸಿದರು. ತಾಪಂ ಇಒ ಕೆ.ರಾಜಶೇಖರ್, ಸಹಾಯಕ ನಿರ್ದೇಶಕ ಈರಣ್ಣ ನಕ್ರಳ್ಳಿ ಇತರರಿದ್ದರು.
Published on

ಕನಕಗಿರಿ: ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಿಂದ ಆಯ್ಕೆಗೊಂಡ ಹೈದರಾಬಾದ್ ಮೂಲದ ರೀಡ್ ಸಂಸ್ಥೆಯ ಮುಖ್ಯಸ್ಥ ಡಾ.ದಾಯಕರ್ ರಡ್ಡಿ ಮಂಗಳವಾರ ತಾಲೂಕಿನ ಹುಲಿಹೈದರ, ಬಸರಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಅನುಷ್ಠಾನಗೊಂಡ ಯೋಜನೆಗಳನ್ನು ಪರಿಶೀಲಿಸಿದರು.

ಸಂಧ್ಯಾ ಸುರಕ್ಷಾ ಯೋಜನೆಯಡಿ ಕಾಲಮಿತಿ ಹಾಗೂ ನಿಖರವಾಗಿ ವೃದ್ಧಾಪ್ಯ ವೇತನ ಬರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ನರೇಗಾ ಯೋಜನೆಯಡಿ ನಿರ್ವಹಿಸಲ್ಪಟ್ಟ ಕಾಮಗಾರಿ ಕಡತ ಹಾಗೂ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

ನಂತರ ಎರ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ವಿವಿಧ ಸ್ವ-ಸಹಾಯ ಸಂಘಗಳ ಪುಸ್ತಕ ನಿರ್ವಹಣೆ, ಲೋನ್ ಪಡೆದು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ವಿವರ ಪಡೆದರು. ಪಿಎಂಎವೈ ಯೋಜನೆಯಡಿ ಅನುಷ್ಠಾನಗೊಂಡ ಮನೆಗಳಿಗೆ ಭೇಟಿ ನೀಡಿ ಯೋಜನೆಯಿಂದ ಫಲಾನುಭವಿಗಳಿಗೆ ಆಗಿರುವ ಉಪಯೋಗದ ಬಗ್ಗೆ ಮಾಹಿತಿ ಪಡೆದರು. ನರೇಗಾದಡಿ ಅನುಷ್ಠಾನಗೊಂಡ ಶೌಚಗೃಹ ಕಾಮಗಾರಿ, ಶಾಲಾ ಕಾಂಪೌಂಡ್, ನಾಲಾ ಸುಧಾರಣೆ ಕಾಮಗಾರಿ ವೀಕ್ಷಿಸಿದರು.

ತಾಪಂ ಇಒ ಕೆ.ರಾಜಶೇಖರ್, ಸಹಾಯಕ ನಿರ್ದೇಶಕರಾದ ಶರಪೂನ್ನಿಸಾ ಬೇಗಂ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಜಿಲ್ಲಾ ವಸತಿ ಶಾಖೆಯ ಹುಸೇನ್‌ಸಾಬ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಅಮರೇಶ್ ರಾಠೋಡ್, ಬಸವರಾಜ ಸಂಕನಾಳ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಂತ್ರಿಕ ಸಂಯೋಜಕ ಸೈಯದ್ ತನ್ವೀರ್, ಐಇಸಿ ಸಂಯೋಜಕ ಶಿವಕುಮಾರ್ ಕೆ, ಎಂಐಎಸ್ ಸಂಯೋಜಕ ಮೇಘರಾಜ, ಎನ್‌ಆರ್‌ಎಲ್‌ಎಂ ಸಂಯೋಜಕಿ ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net