ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಈಡೇರಿಕೆಗೆ ಪಟ್ಟು

ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Dok Sevak
ನಗರದ ಸ್ವಾತಂತ್ರ್ಯ ಉದ್ಯಾವನದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.foledr
Published on: 

ಬೆಂಗಳೂರು: ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಂಘದ ವಲಯ ಅಧ್ಯಕ್ಷ ಬೈಲಪ್ಪ ಮಾತನಾಡಿ, ಇಲಾಖೆಯು ನಮ್ಮಿಂದ ಪಡೆದುಕೊಳ್ಳುತ್ತಿರುವ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಇಲಾಖೆಯ ನೌಕರರು ಎಂಬುದಕ್ಕೆ ಗುರುತು ನೀಡಿಲ್ಲ. ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ದಶಕಗಳಿಂದ ಒತ್ತಾಯಿಸಿಕೊಂಡು ಬರುತ್ತಿದ್ದರು ಅಧಿಕಾರಿಗಳಿಂದ ಯಾವುದೇ ರೀತಿ ಸ್ಪಂದನೆಯಿಲ್ಲ ಎಂದು ಹೇಳಿದರು.

ದೇಶದಾದ್ಯಂತ ಅಂಚೆ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. 8ನೇ ವೇತನ ಆಯೋಗದಲ್ಲಿ ಅನ್ಯಾಯವಾಗಿದೆ. ಸೇವಾ ಭದ್ರತೆ, ಪಿಂಚಣಿ, ವೈದ್ಯಕೀಯ, ಗ್ರಾಚ್ಯುಟಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದೆ. ಸಮಸ್ಯೆಗಳು ಏನು ಎಂಬುದು ಮೇಲಾಧಿಕಾರಿಗಳ ಗಮನಕ್ಕೆ ಇದೆ. ಅವರಿಗೆ ಅವರ ಹಿತವೇ ಮುಖ್ಯವಾಗಿದೆ ಹೊತರು ನಮ್ಮ ಮೇಲೆ ಕಾಳಜಿಯಿಲ್ಲ ಎಂದು ದೂರಿದರು.

ಬೀಟ್ ಯಾಂತ್ರೀಕರಣ ಆದೇಶವನ್ನು ಅಧಿಕಾರಿಗಳು ಹಿಂಪಡೆಯಬೇಕು. ನೌಕರರ ಮೇಲಿನ ಹೆಚ್ಚುವರಿ ಕೆಲಸದ ಹೊರೆ ತಪ್ಪಿಸಬೇಕು. ಸ್ಥಳೀಯ ಪರಿಸ್ಥಿತಿ, ಕೆಲಸದ ಪ್ರಮಾಣ ಮತ್ತು ಲಭ್ಯವಿರುವ ಮೂಲಸೌಕರ್ಯಗಳನ್ನು ಪರಿಗಣಿಸದೆ ವಿಧಿಸುತ್ತಿರುವ ಅವೈಜ್ಞಾನಿಕ ಗುರಿಗಳನ್ನು ಹಿಂಪಡೆಯಬೇಕು. ಇಲಾಖೆ ಕೆಲಸಗಳಿಗಾಗಿ ನೌಕರರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಗತ್ಯ ಕಟ್ಟಡ, ಪೀಠೋಪಕರಣ, ಲೇಖನ ಸಾಮಗ್ರಿ, ಕಂಪ್ಯೂಟರ್, ಮೊಬೈಲ್ ಸಾಧನಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಬಾಕಿ ವೇತನ, ಬದಲು ನೌಕರರ ಸಂಭಾವನೆ, ಬಡ್ತಿ, ಪರೀಕ್ಷೆ ಮತ್ತು ವರ್ಗಾವಣೆ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಸಾರ್ವಜನಿಕರು ನಮ್ಮನ್ನು ಗುರುತಿಸಲು ಗುರುತಿನ ಚೀಟಿ, ಸಮವಸ ನೀಡಬೇಕು ಎಂದು ಪಟ್ಟು ಹಿಡಿದರು.

ಕಾರ್ಯದರ್ಶಿ ರಾಜ ಕುಮಾರ, ಪದಾಧಿಕಾರಿಗಳಾದ ಎಂ.ಎನ್. ಕುರಟ್ಟಿ, ಜಗದೀಶ್, ವೀರಭದ್ರ, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು.