

ರಾಯಚೂರು ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿಸಿದ್ದು ಮಹಾನಗರ ವ್ಯಾಪ್ತಿಯ ಕುರಿತು ಹೊಸದಾಗಿ ಸೇರ್ಪಡೆಗೊಂಡಿರುವ ಸಾಮಾನ್ಯ ಜನರಲ್ಲಿ ಮಾಹಿತಿ ಕೊರತೆಯಿದೆ. ಹಣವಂತರು ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡುತ್ತಿದ್ದು ಜನರಿಗೆ ಆರ್ಥಿಕ ನಷ್ಟವಾಗದನ್ನು ತಡೆಯಲು ಜನರಿಗೆ ಮಾಹಿತಿ ನೀಡಬೇಕೆಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ವೆಂಕಟೆಶ ನಾಯಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರು ಕಡಿಮೆ ಬೆಲೆ ಭೂಮಿ ಮಾರಾಟವನ್ನು ನಿಲ್ಲಿಸಬೇಕು. ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿಸಿದ್ದರಿಂದ ಭೂಮಿಗೆ ಹೆಚ್ಚು ಬೆಲೆ ದೊರೆಯಲಿದ್ದು, ಸಾರ್ವಜನಿಕರು ಭೂಮಿ ಮಾರಾಟ ಮಾಡದಂತೆ ಮನವಿ ಮಾಡಿದರು.
ರೈತರು ಅನೇಕ ಸಮಸ್ಯೆಗಳಿಂದಾಗಿ ಭೂಮಿ ಮಾರಾಟ ಮಾಡುತ್ತಿದ್ದಾರೆ. ಮತ್ತಷ್ಟು ಬೆಲೆ ಬರುವದು ಜನರಿಗೆ ಗೊತ್ತಿಲ್ಲ. ಕಾರಣ ಭೂಮಿ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವಗ್ರಾಮೀಣ ಪ್ರದೇಶದ ಜನರಿಗೆ ವ್ಯಾಪ್ತಿಯ ಕುರಿತು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ, ಶಿವರಾಮಗೌಡ, ವೆಂಕಟೇಶ ಮಡಿವಾಳ, ನರೇಂದ್ರ, ದೂಳಯ್ಯ, ವಿರೂಪಾಕ್ಷಿ, ನರಸಿಂಹಲು ಇದ್ದರು.